ಬೆಳಗಾವಿಯ ಸದಾಶಿವನಗರದ ಗೌರಿ ಮಹಿಳಾ ಮಂಡಳದ ವತಿಯಿಂದ ಅತ್ಯಂತ ಸಂಭ್ರಮದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಡಾ. ಪೂಜಾ ಹಲ್ಯಾಳ ಉಪಸ್ಥಿತರಿದ್ಧರು.ವೇದಿಕೆಯ ಮೇಲೆ ಉಪಾಧ್ಯಕ್ಷರಾದ ಶಶಿಕಲಾ ಜಗಜಂಪಿ, ಕಾರ್ಯದರ್ಶಿಗಳಾದ ಸುಜಾತಾ ಗೋಕಾಕ್ ಉಪಸ್ಥಿತರಿದ್ಧರು.
ಮುಖ್ಯ ಅತಿಥಿಗಳಾಗಿ ಡಾ. ಪೂಜಾ ಹಲ್ಯಾಳ ಅವರು ಮಹಿಳೆಯರ ಸಬಲಿಕರಣಕ್ಕಾಗಿ ಸಲಹೆಗಳನ್ನು ನೀಡಿದರು,
ಮಹಿಳಾ ದಿನದ ಅಂಗವಾಗಿ, ರಂಗೋಲಿ, ವನ್ ಮಿನಿಟ್ ಗೇಮ್ಸಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದ ಯಶಸ್ವಿಗೆ ಪ್ರೇಮಾ ಎತ್ತಿನಮನಿ , ಅನು ಹಳೇಮನಿ ಇನ್ನಿತರರು ಶ್ರಮಿಸಿದರು.