Belagavi

ನಮಗೆ ಸಮುದಾಯ ಭವನ ಬೇಕು…

Share

ಬೆಳಗಾವಿಯ ಗಣಾಚಾರಿ ಗಲ್ಲಿಯಲ್ಲಿ ಸಮುದಾಯ ಭವನವನ್ನ ನಿರ್ಮಿಸಲೇ ಬೇಕೆಂದು ಒತ್ತಾಯಿಸಿ ಇಂದು ಗಣಾಚಾರಿ ಗಲ್ಲಿಯ ರಹಿವಾಸಿಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆಯನ್ನು ನಡೆಸಲಾಯಿತು.

ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರತಿಭಟನಾ ರ್ಯಾಲಿಯ ಮೂಲಕ ಬೆಳಗಾವಿ ಗಣಾಚಾರಿ ಗಲ್ಲಿ ರಹಿವಾಸಿಗಳು ಆಗಮಿಸಿ, ಮಹಾನಗರ ಪಾಲಿಕೆಗೆ ಮನವಿಯನ್ನು ಸಲ್ಲಿಸಿದರು.

ಗಣಾಚಾರಿ ಗಲ್ಲಿಯಲ್ಲಿ ಎಲ್ಲ ಸಮುದಾಯದವರು ವಾಸಿಸುತ್ತಿದ್ದಾರೆ. ನಗರಸೇವಕ ಶಂಕರ ಪಾಟೀಲ್ ಅವರು ಇಲ್ಲಿ ಸಮುದಾಯಭವನವನ್ನು ನಿರ್ಮಿಸಲು ಮುಂದಾಗಿದ್ದಾರೆ. ಆದರೇ, ಖಾಟೀಕ ಸಮಾಜದ ಕೆಲ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೇ ಸಮುದಾಯ ಭವನವನ್ನು ಖಾಟೀಕ ಸಮಾಜವು ಮಹಾನಗರ ಪಾಲಿಕೆಗೆ ದಾನ ನೀಡಿದ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ದೇವಸ್ಥಾನದ ಜಾಗೆಯಲ್ಲಿ ಅಲ್ಲ. ಸಮುದಾಯಭವನವನ್ನು ಮಹಾನಗರ ಪಾಲಿಕೆಯಿಂದ ಅನುಮತಿಯನ್ನು ಪಡೆದೇ ನಿರ್ಮಿಸಲಾಗುತ್ತಿದ್ದು, ಸುಖಾ ಸುಮ್ಮನೆ ಕೆಲ ಜನರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ಇನ್ನು ಮಹಿಳಾ ಪ್ರತಿಭಟನಾಕಾರರು ಖಾಟೀಕ ಸಮಾಜದ ಕೆಲ ಜನರು ಸಮುದಾಯ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೇ, ಗಣಾಚಾರಿ ಗಲ್ಲಿಯಲ್ಲಿ ಎಲ್ಲ ಜನರು ವಾಸಿಸುತ್ತಿದ್ದು, ನಗರಸೇವಕರು ಮಹಾನಗರ ಪಾಲಿಕೆ ಅನುಮತಿಯನ್ನು ಪಡೆದೇ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದಾರೆ. ಬೇರೆಯವರನ್ನು ಕರೆ ತಂದು ಕೆಲ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಗಣಾಚಾರಿ ಗಲ್ಲಿಯ ರಹಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Tags:

error: Content is protected !!