Belagavi

ವೀರಶೈವ ಲಿಂಗಾಯತ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ…

Share

ವೀರಶೈವ ಲಿಂಗಾಯಿತ ಸಮಾಜವು ಸರ್ವ ಜನಾಂಗದ ಶಾಂತಿಯ ತೋಟ ಎಂದು ಅರಳಿಕಟ್ಟಿಯ ತೋಂಟದಾರ್ಯ ವಿರಕ್ತ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಜೀಗಳು ಹೇಳಿದರು.

ಇಂದು ಬೆಳಗಾವಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವವನ್ನು ಆಯೋಜಿಸಲಾಗಿತ್ತು. ಈ ನಿಮಿತ್ಯ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಮೆರವಣಿಗೆಯೂ ನಗರದ ವಿವಿಧ ಮಾರ್ಗಗಳ ಮೂಲಕ ನಗರದ ಕುಮಾರಗಂಧರ್ವ ಕಲಾಮಂದಿರಕ್ಕೆ ತಲುಪಿ ಮೆರವಣಿಗೆಯೂ ಮುಖ್ಯ ವೇದಿಕೆ ಕಾರ್ಯಕ್ರಮವನ್ನು ಕೂಡಿತು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀ ಮತ್ತು ಅರಳಿಕಟ್ಟಿಯ ತೋಂಟದಾರ್ಯ ವಿರಕ್ತ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ, ಹಾಗೂ ಹುಣಶಿಕಟ್ಟಿ, ಹಿರೇಮಠದ ಶ್ರೀ ಬಸವರಾಜ್ ದೇವರುಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಅರಳಿಕಟ್ಟಿಯ ತೋಂಟದಾರ್ಯ ವಿರಕ್ತ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು, ಎಲ್ಲ ಸಮುದಾಯಗಳು ಒಂದೇ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ರೇಣುಕರಾಗಲಿ, ಬಸವಣ್ಣನವರಾಗಲಿ ಸಮಾಜದ ಏಳ್ಗೆಯನ್ನೇ ಬಯಸಿದ್ದಾರೆ. ಎಲ್ಲರೂ ಸೌಹಾರ್ದಯುವಾಗಿ ಬದುಕುಬೇಕು. ಉತ್ತರ ಕರ್ನಾಟಕದಲ್ಲಿ ಮಠಗಳ ಕೊಡುಗೆ ಅತಿಯಾಗಿದೆ. ವೀರಶೈವ ಲಿಂಗಾಯಿತ ಸಮಾಜವು ಸರ್ವ ಜನಾಂಗದ ಶಾಂತಿಯ ತೋಟ ಎಂದರು.

ವಿಜಯಪುರದ ಡಾ. ಎಸ್.ವಿ. ಗಂಗಾಧರಯ್ಯನವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಕುರಿತು ಉಪನ್ಯಾಸವನ್ನು ನೀಡಿದರು. ಬೈಟ್

ಇನ್ನು ಗಣ್ಯರ ಹಸ್ತದಿಂದ ಸಾಧಕರಾದ ಪ್ರಿಯಾ ಸವದಿ, ಮಲ್ಲ್ಯಾ ಬಾಗಲಕೋಟ, ಶ್ರೀದೇವಿ ಹಿರೇಮಠ ಮತ್ತು ಚನ್ನಯ್ಯ ಚರಲಿಂಗಮಠ ಅವರನ್ನು ಸತ್ಕರಿಸಲಾಯಿತು.

Tags:

error: Content is protected !!