Kagawad

ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಬೇರೆ-ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜು ಕಾಗೆ ಚಾಲನೆ

Share

ಕಾಗವಾಡ: ಮನೆಗಳು ಕಟ್ಟಿಸಲು ಸರಕಾರ ಅನುದಾನ ನೀಡುತ್ತಿದೆ. ಆದರೆ, ನೀಡಿರುವ ಅನುದಾನ ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುಗಳ ದರ ದುಬಾರಿಯಾಗಿದ್ದು, ಸರಕಾರ ಪ್ರತಿಯೊಬ್ಬ ಫಲಾನುಭವಿಗಳಿಗೆ ೫ ಲಕ್ಷ ರೂ. ಅನುದಾನ ಮಂಜೂರುಗೊಳಿಸಬೇಕು. ಈ ಬಗ್ಗೆ ರಾಜ್ಯದ ಅನೇಕ ಶಾಸಕರು ಸರಕಾರದ ಮೇಲೆ ಒತ್ತಡ ಹೇರಿ ಸರಕಾರದ ನಿರ್ಣಯ ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆಯೆಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು. ಶನಿವಾರ ರಂದು ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಬೇರೆ-ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕರು ಮಾತನಾಡುತ್ತಿದ್ದರು.

ಕಾಗವಾಡದ ಜನರಿಗಾಗಿ ೯೨ ಮನೆಗಳು ಮಂಜೂರುಗೊ0ಡಿವೆ. ಅದರಲ್ಲಿ ಎಸ್.ಸಿ/ಎಸ್.ಟಿ ಸಮುದಾಯದ ೨೮ ಕುಟುಂಬಗಳು ಮತ್ತು ಸಾಮಾನ್ಯರ ೬೪ ಕುಟುಂಬಗಳಾಗಿವೆ. ಮಹಿಳೆರಿಗಾಗಿ ೧೫೨ ಹೊಲಿಗೆ ಯಂತ್ರಗಳು ವಿತರಿಸಲಾಯಿತು. ೧೫ನೇ ಹಣಕಾಸು ಯೋಜನೆಯಡಿಯಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ರಾಜು ಕಾಗೆ ಇವರು ಚಾಲನೆ ನೀಡಿದರು. ಇದರಲ್ಲಿ ಒಂದು ಜೆಸಿಬಿ, ಇಂದು ಫಾಗಿಂಗ್ ಯಂತ್ರ ಹಾಗೂ ಸೆಟಿಂಗ್ ಯಂತ್ರ ಖರಿದಿಸಿದ್ದು, ಇವುಗಳಿಗೆ ಶಾಸಕರು ಪೂಜೆ ಸಲ್ಲಿಸಿದರು.

ಕಾಗವಾಡದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಮಾತನಾಡಿ, ಕಳೇದ ಅನೇಕ ವರ್ಷಗಳ ಕಾಗವಾಡ ಪಟ್ಟಣದಲ್ಲಿ ಇಷ್ಟೊಂದು ಅಭಿವೃದ್ಧಿ ಕಾಮಗಾರಿಗಳು ಮಂಜೂರುಗೊ0ಡಿದ್ದು, ಶಾಸಕ ರಾಜು ಕಾಗೆ ಇವರ ಪ್ರಯತ್ನ ವಿಶೇಷವಾಗಿದೆಯೆಂದರು. ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಕೆ.ಕೆ.ಗಾವಡೆ ಮಂಜೂರಗೊAಡ ಕಾಮಗಾರಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಅಭಿಯಂತರಾದ ಎ.ಎನ್.ನಾಗನಕೇರಿ ಇವರು ಶಾಸಕರಿಗೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಪ್ರಾಚಾರ್ಯ ಬಿ.ಜೆ.ಪಾಟೀಲ ಮಾತನಾಡಿ, ಶಿಥಿಲಗೊಂಡ ಪಟ್ಟಣ ಪಂಚಾಯತಿಯ ನೂತನ ಕಟ್ಟಡ ನಿರ್ಮಿಸುವ ಬಗ್ಗೆ ಬೇಡಿಕೆಯಿಟ್ಟರು.

ಕಾಗವಾಡದ ಗ್ರೇಡ್-೨ ತಹಶೀಲ್ದಾರ ಶ್ರೀಮತಿ ಜಕಾತೆ, ಪಿಕೆಪಿಎಸ್ ಅಧ್ಯಕ್ಷ ಕಾಕಾ ಪಾಟೀಲ, ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸೌರಭ ಪಾಟೀಲ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಹಿರಿಯರಾದ ಅಣ್ಣಾಸಾಹೇಬ ಕಠಾರೆ, ಪಟ್ಟಣ ಪಂಚಾಯತಿಯ ಸರಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರಾದ ಶಾಂತಿನಾಥ ಕರವ, ಪ್ರಕಾಶ ಪಾಟೀಲ, ಜೀತು ಪಾಟೀಲ, ಪವನ ಪಾಟೀಲ, ರಮೇಶ ಚೌಗುಲೆ, ವಿದ್ಯಾಧರ ಧೊಂಡಾರೆ, ಜನಾರ್ಧನ ಧೊಂಡಾರೆ, ಮೀರಾ ಕಾಂಬಳೆ, ವಿನಾಯಕ ಚೌಗುಲೆ, ಸಚೀನ ಚೌಗುಲೆ, ಪದ್ಮಾಕರ ಕರವ, ಸೇರಿದಂತೆ ಅನೇಕರು ಇದ್ದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!