ಬೇಸಿಗೆ ಕಾಲ ಇರುವುದರಿಂದ ನೀರನ್ನು ಮಿತವಾಗಿ ಬಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನೀರಾವರಿ ನಿಗಮದ ಬೈಲಹೊಂಗಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತೌಫಿಕ್ ಶೇಖ್ ತಿಳಿಸಿದರು.

ಬೈಲಹೊಂಗಲ ತಾಲೂಕಿನ ತಿಗಡಿ ಹರಿನಾಲಾ ಡ್ಯಾಮನಿಂದ ಗುರುವಾರ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿ ನೀರು ಹರಿಸಿ ಬಿಟ್ಟು ನೆರೆದಿದ್ದ ರೈತರಿಗೆ ತಿಳಿಹೇಳಿದರು. ಕುಡಿಯುವ ನೀರಿನ ಯೋಜನೆಗಾಗಿ ತಿಗಡಿ ಹರಿನಾಲಾ ಡ್ಯಾಮ ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡ್ಯಾಮನಿಂದ ನೀರಿನ ಕೊರತೆ ನಿಗಿದಂತಾಗಿದೆ. ಆದ್ದರಿಂದ ನಾವೆಲ್ಲರೂ ಮಿತವಾಗಿ ನೀರಿನ ಬಳಕೆ ಮಾಡುವುದರ ಜತೆಗೆ ಮುಂದಿನ ಪೀಳಿಗೆಗೂ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಕುರಿತು ಜಾಗೃತ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಅಭಿಯಂತರ ಸುಧೀರ್ ಬುಚ್ಚೆ, ಸುರೇಶ್ ಹೊಳೆಯಾಚಿ, ಅಶೋಕ ತವಟೆ, ಈರಣ್ಣ ಹುಡೇದ, ಮಡಿವಾಳಪ್ಪ ಗಂಗನ್ನವರ,ಚನಗೌಡ ಪಾಟೀಲ, ಅಡಿವೆಪ್ಪ ಪಾಟೀಲ, ವೀರಪ್ಪ ಶಿವಪೂಜಿ, ರಮೇಶ್ ಗಂಗನ್ನವರ, ಮಂಜು ನೇಗಿನಹಾಳ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.