Accident

ಬೈಕ್’ಗೆ ಗುದ್ದಿದ ಅಪರಿಚಿತ ವಾಹನ

Share

 

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಯುವಕನೊಬ್ಬ ಮೃತಪಟ್ಟ ಘಟನೆ ಗೋವಾದಲ್ಲಿ ಗುರುವಾರ ಸಂಭವಿಸಿದೆ.

ಬೆಳಗಾವಿಯ ವಿಜಯನಗರ ನಿವಾಸಿ ಆದರ್ಶ ಮುರಗೋಡ ( 27 ) ಮೃತ ದುರ್ದೈವಿ. ಬೈಕ್ ನಲ್ಲಿ ಗೋವಾಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸದಾಶಿವನಗರದ ಸ್ಮಶಾನದಲ್ಲಿ ನೆರವೇರಲಿದೆ.

Tags:

error: Content is protected !!