Belagavi

ಬೆಳಗಾವಿ ನಿಂತಿದ್ದ ಕಾರ್ ಮೇಲೆ ಅಪ್ಪಳಿಸಿದ ಕಾಂಕ್ರೀಟ್ ತುಂಬಿದ ಲಾರಿ: ಕಾರಿನಲ್ಲಿದ್ದ ಇಬ್ಬರೂ ಪವಾಡ ಸದೃಶ ಪಾರು

Share

ಬೆಳಗಾವಿ ಕೆಎಲ್ಇ ಆಸ್ಪತ್ರೆಯ ಮುಂಭಾಗದಲ್ಲಿರುವ ಸರ್ವಿಸ್ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರ್ ಮೇಲೆ ಕಾಂಕ್ರೀಟ್ ತುಂಬಿದ ಲಾರಿ ಅಪ್ಪಳಿಸಿದ ಪರಿಣಾಮ ಕಾರು ನುಜ್ಜು ಗುಜ್ಜಾಗಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಹೌದು ದೇವರು ದೊಡ್ಡವನು ಭಾರಿ ಅನಾಹುತದಲ್ಲಿ ಅಪ್ಪಚ್ಚಿಯಾಗಿದ್ದ ಕಾರಿನೊಳಗಡೆ ಇದ್ದ ಇಬ್ಬರು ಕ್ಷಣಮಾತ್ರದಲ್ಲೇ ಸಾವಿನ ಬಾಗಿಲು ತಟ್ಟಿ ಬದುಕುಳಿದ ಅಪರೂಪದ ಘಟನೆಯಾಗಿದ್ದು, ಅವರು ಧಾರವಾಡದಿಂದ ಶೋರೂಮ್ ಮುಂದಕ್ಕೆ ಹೋಗಲು ಕೇಳಿ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಯಾರಿಗೂ ಕಾಯುತ್ತಾ ಕಾರಿನಲ್ಲಿ ಕುಳಿತಿದ್ದಾರೆ. ಅಷ್ಟರಲ್ಲಿ ಯಮಸ್ವರೂಪಿಯಾಗಿ ಬಂದ ಕಾಂಕ್ರೀಟ್ ತುಂಬಿದ್ದ ಬೃಹತ್ವಾರಿ ಕಾರ ಮೇಲೆ ಅಪ್ಪಳಿಸಿದೆ.

ಒಳಗಡೆ ಇದ್ದ ಇಬ್ಬರೂ ಸಿಲುಕಿಕೊಂಡಿದ್ದಾರೆ. ತಕ್ಷಣವೇ ಧಾವಿಸಿದ ಸ್ಥಳೀಯರು ಹಾಗೂ ಅಗ್ನಿಶಾಮಕದಳ ಪೊಲೀಸರು ಸೇರಿ ಅವರನ್ನು ರಸಾಸಪಟ್ಟು ಹೊರ ತೆಗೆದಿದ್ದಾರೆ ಗಾಯಗಳಾಗಿದ್ದು ಕೇಳಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಘಟನೆ ಕುರಿತು ಮಾಹಿತಿ ನೀಡಿದರು

ಇಬ್ಬರನ್ನು ಭಗವಂತ ತಿಳಿಯರು ಅಗ್ನಿಶಾಮಕ ದಳ ಪೊಲೀಸ್ರು ಸೇರಿ ಶೀಘ್ರವಾಗಿ ಕಾರ್ಯಾಚರಣೆ ಮಾಡಿದ್ದಾರೆ ಕ್ರೇನ್ ಕೂಡ ಬೇಗ ಬಂದಿದ್ದು ಅನುಕೂಲವಾಗಿದೆ. ಧಾರ್ವಾಡ್ ನಿವಾಸಿಗಳಾದ ಪರಪ್ಪ ಬಾಳಿಕಾಯಿ ನಿಂಗಪ್ಪ ಕೊಪ್ಪದ್ ಪ್ರಣಪಾಯದಿಂದ ಪಾರಾಗಿದ್ದು ಕೇಳಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಿಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು

ಕರಾಚರಣೆಗೆ ಸಹಾಯ ಮಾಡಿದ ಸ್ಥಳೀಯರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕಾರ್ಯಾಚರಣೆ ನಡೆದಿದ್ದರಿಂದ ಕೆಲವೊಂದು ಸಂಚಾರ ಬಂದ್ ಮಾಡಲಾಗಿತ್ತು ವಾಹನದಟ್ಟಣೆಯಾಗಿತ್ತು ಉತ್ತರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Tags:

error: Content is protected !!