ಬೆಳಗಾವಿಯ ಮಹಾಂತೇಶ ನಗರದ ಫ.ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಅನುಭಾವಗೋಷ್ಟಿ ನಡೆಯಿತು

ಆರಂಭದಲ್ಲಿ ಸ್ಥಳೀಯ ನಿವಾಸಿಗಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಬಸವಾದಿ ಶರಣರ ವಚನಗಳನ್ನು ವಿಶ್ಲೇಷಣೆ ಮಾಡಿದರು. ಶರಣ ಬಿದ್ದಿ ಬಾಚಯ್ಯ ನವರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಸವರಾಜ ಕುಪ್ಪಸಗೌಡ್ರ,
ಕಾಯಕ, ದಾಸೋಹ ಪ್ರಸಾದದ ಮಹತ್ವವನ್ನು 12ನೇ ಶತಮಾನದ ಬಸವಾದಿ ಶರಣರು ಲೋಕಕ್ಕೆ ಸಾರಿದ್ದಾರೆ. ದೇವರು ಕೊಟ್ಟ ಕಾಯವನ್ನು ಸತ್ಕಾರ್ಯಗಳ ಮೂಲಕ ಸದ್ವಿನಿಯೋಗ ಮಾಡಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಶರಣರ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ ಸಂದೇಶವಾಗಿದೆ. ಎಲ್ಲ ಶರಣರಲ್ಲಿ ಅಮೃತಮಯ ಮೌಲ್ಯಗಳಿದ್ದು,ದಿವ್ಯ ಶಕ್ತಿಯಾಗಿದ್ದರು.ಶರಣರ ಮಿಕ್ಕುಳಿದ ಪ್ರಸಾದದ ಸಂಗ್ರಹದ ಕಾಯಕದಲ್ಲಿ ತೊಡಗಿದ್ದ ಶರಣ ಬಿಬ್ಬಿ ಬಾಚಯ್ಯ ದಾಸೋಹ ಅರ್ಪಣೆಯ ಜೊತೆಗೆ ಪ್ರಸಾದವನ್ನು ಹಾಳು ಮಾಡಬಾರದೆಂಬ ಮಹತ್ವದ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು
ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಪರಿಚಯಿಸಿದರು. ಓಂಕಾರ್ ಚವಲಗಿ ದಾಸೋಹ ಸೇವೆ ಮಾಡಿದರು ಶಂಕರ್ ಗುಡಸ, ಬಸವರಾಜ್ ಗುರುನಗೌಡ್ರು ಅಕ್ಕಮಹಾದೇವಿ ತೆಗ್ಗಿ, ಸುರೇಶ ನರಗುಂದ, ಸುವರ್ಣ ಗುಡಸ, ಶ್ರೀದೇವಿ ನರಗುಂದ, ಸುನಿಲ್ ಸಾಣಿ ಕೊಪ್ಪ, ಸಿದ್ದಪ್ಪ ಸಾರಾಪುರಿ, ಜಯಶ್ರೀ ಚೌಲಗಿ, ಜ್ಯೋತಿ ಬಾದಾಮಿ, ಸುಜಾತ ಮತ್ತಿಕೊಪ್ಪ, ಲಕ್ಷ್ಮಿಕಾಂತ ಗುರವ, ಸಂಗಮೇಶ ಅರಳಿ ಮತ್ತಿತರರು ಉಪಸ್ಥಿತರಿದ್ದರು