ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಕುಂದಾನಗರಿ ಬೆಳಗಾವಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ ಇಂದು ಸಾಯಂಕಾಲ ಸುಮಾರಿಗೆ ವರುಣ ದರ್ಶನ ಕೊಟ್ಟಿದ್ದು, ವರ್ಷದ ಮೊದಲ ವರ್ಷಧಾರೆಗೆ ಜನ ಫುಲ್ ಖುಷ್ ಆದರು.ಕಳೆದ 1 ತಿಂಗಳಿಂದ ಬಿಸಿಲಿನ ಆರ್ಭಟ ಜೋರಾಗಿದೆ. ವಿಜಯಪುರವನ್ನು ಮೀರಿಸುವಷ್ಟು ಬಿಸಿಲು ಬೆಳಗಾವಿಯಲ್ಲಿ ದಾಖಲಾಗುತ್ತಿತ್ತು.

ಹಗಲಿನಲ್ಲಿ ಮನೆ ಬಿಟ್ಟು ಹೊರಗೆ ಬಾರದಷ್ಟು ಬಿಸಿಲಿದ್ದರೆ, ರಾತ್ರಿ ಹೊತ್ತು ಹೆಚ್ಚು ಸೆಕೆ ಇದ್ದ ಹಿನ್ನೆಲೆಯಲ್ಲಿ ನಿದ್ರೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.
ಯಾವಾಗ ಮಳೆ ಆಗಿ, ನಾವೆಲ್ಲಾ ಕೂಲ್ ಆಗುತ್ತೇವೋ ಎಂದು ಕಾಯುತ್ತಿದ್ದ ಜನತೆಗೆ ನಿರೀಕ್ಷೆಯಂತೆ ಗುಡುಗು ಸಿಡಿಲು ಬಿರುಗಾಳಿ ಸಹಿತ ಮಳೆ ಆಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ರಸ್ತೆ ತುಂಬೆಲ್ಲಾ ನೀರು ನಿಂತಿವೆ.