Bagalkot

ಬೀರು ಬಿಸಿನಲ್ಲಿಯೂ ಭಕ್ತಿಯ ಪರಾಕಾಷ್ಠೆ…

Share

ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಆದರೇ ಶ್ರೀಶೈಲ್ ಮಲ್ಲಿಕಾರ್ಜುನನ ಭಕ್ತರಲ್ಲಿ ಮಾತ್ರ ಪಾದಯಾತ್ರೆಯ ಉತ್ಸಾಹ ಅತಿಯಾಗಿದೆ. ಶ್ರೀಶೈಲ್ ಮಲ್ಲಿಕಾರ್ಜುನನ ದರ್ಶನಕ್ಕೆ ಬೀರು ಬಿಸಿಲನ್ನೂ ಕೂಡ ಲೆಕ್ಕಿಸದೇ ಭಕ್ತಿಯ ಪರಾಕಾಷ್ಠೆಯನ್ನು ಭಕ್ತರು ಮೆರೆಯುತ್ತಿದ್ದಾರೆ.

ಹೌದು ಆಂಧ್ರ ಪ್ರದೇಶದ ಶ್ರೀ ಶೈಲಂನಲ್ಲಿರುವ ಶ್ರೀ ಮಲ್ಲಿಕಾರ್ಜುನನ ಯಾತ್ರಾ ಮಹೋತ್ಸವ ಆರಂಭಗೊಂಡಿದೆ. ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರು ವಿವಿಧ ರಾಜ್ಯಗಳಲ್ಲಿ ಇದ್ದಾರೆ. ಈ ವರ್ಷದ ರಣ ಬಿಸಿಲಿನಲ್ಲಿಯೂ ಶ್ರೀ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮೂಲಕ ಮುಧೋಳ ರಾಯಚೂರ ರಸ್ತೆಯಲ್ಲಿ ಸಾಗರೊಪಾದಿಯಲ್ಲಿ ಭಕ್ತರು ಸಾಗುತ್ತಿದ್ದಾರೆ. ಪಾದಯಾತ್ರಾರ್ಥಿಗಳಿಗೆ ರಸ್ತೆಯಲ್ಲಿ ಭಕ್ತರಿಂದ ಉಚಿತ ಸೇವೆ ನೀಡಲಾಗುತ್ತಿದೆ. ಉಚಿತ ಅಲ್ಪೊಪಹಾರ, ಊಟ,ವಸತಿ,ಹಣ್ಣು,ಹಾಲು,ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರಾರ್ಥಿಗಳನ್ನ ಟೆಂಟ್ ಗಳಿಗೆ ಕರೆದು ಹೋಗಿ ಆರೈಕೆ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಪಾದಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಯುದ್ದಕ್ಕೋ ಕಂಬಿ ಮಲ್ಲಯ್ಯನ ಸ್ಮರಣೆ ಮಾಡುತ್ತ ಭಕ್ತರು ಸಾಗುತ್ತಿದ್ದಾರೆ. ಮಹಾರಾಷ್ಟ್ರ,ಬೆಳಗಾವಿ,ಚಿಕ್ಕೊಡಿ ಅಥಣಿ, ಭಾಗದಿಂದ ಯಾತ್ರಾರ್ಥಿಗಳು ಭಾಗಿಯಾಗುತ್ತಿದ್ದಾರೆ

Tags:

error: Content is protected !!