hubbali

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಿರ್ಧಾರ ಹೈಕಮಾಂಡ್ ಮಾಡ್ತಾರೆ : ಸಚಿವ ಸತೀಶ್ ಜಾರಕಿಹೊಳಿ

Share

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಅದು ನಮ್ಮ ಮಟ್ಟದಲ್ಲಿಲ್ಲ. ಹೈಕಮಾಂಡ್ ಅವರೇ ನಿರ್ಧಾರ ಮಾಡುತ್ತಾರೆ ಕಾದು ನೋಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನಾವು ಅನಿರ್ಣಯ ತೆಗೆದುಕೊಳ್ಳುವಂತಿಲ್ಲ .ಹೈಕಮಾಂಡ್ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇವೆ. ಹೈಕಮಾಂಡ್ ಅವರೇ ನಿರ್ಧಾರ ಮಾಡುತ್ತಾರೆ ಕಾದು ನೋಡೋಣ ಇನ್ನು ಸಾಕಷ್ಟು ಸಮಯ ಇದೆ ಎಂದರು.

ಹನಿಟ್ರ್ಯಾಪ್ ಗೆ ಸಂಬಂಧಪಟ್ಟಂತೆ ರಾಜಣ್ಣ, ರಾಜೇಂದ್ರ ದೂರು ವಿಚಾರ

ಅದು ಪೊಲೀಸ್ ತನಿಖೆ ಮಾಡಬೇಕು, ನಾವೇನು ಹೇಳೋದು. ತನಿಖೆ ಮಾಡಲಿ ಕಾದು ನೋಡೋಣ ಎಂದರು.

ಮಹಾಯನಾಯಕ ಯಾರು ಎಂಬ ವಿಚಾರಕ್ಕೆ ಅವೆಲ್ಲ ನಮಗೆ ಹೇಗೆ ಗೊತ್ತು

ನಾವು ಯಾರು ಅಂತ ಹೇಳಲಿಕ್ಕೆ ಆಗುತ್ತೆ. ಏಜೆನ್ಸಿ ಅವರು ಹೇಳ್ಬೇಕು ನಾವು ಹೇಳೋಕೆ ಆಗಲ್ಲ.
ಸಮಯ ಬಂದಾಗ ಹೇಳೋಣ ಎಂದರು.

ಜಾರ್ಜ್ ನಿವಾಸದಲ್ಲಿ ಸುದೀರ್ಘ ಚರ್ಚೆ ವಿಚಾರ

ನಮ್ಮ ಜಿಲ್ಲೆ ಹಾಗೂ ಅವರ ಇಲಾಖೆಗೆ ಸಂಬಂಧಪಟ್ಟ ಕೆಲಸ ಇರುತ್ತೆ . ಅವರು ನಮ್ಮ ಮಂತ್ರಿಗಳು, ನಾವು ಭೇಟಿಯಾಗಿರ್ತೀವಿ. ಎಲ್ಲದಕ್ಕೂ ರಾಜಕೀಯ ಬೇರೆಸಲು ಆಗುವುದಿಲ್ಲ ಅಭಿವೃದ್ಧಿಗಾಗಿ ಭೇಟಿಯಾಗಿರುತ್ತೇವೆ ಎಂದರು.

ದಲಿತ ಸಚಿವರ ಮಾತಿಗೆ ಹೈಕಮಾಂಡ್ ಮಣ್ಣನೇ ಇಲ್ಲ ಎಂಬ ವಿಚಾರ

ಅದೆಲ್ಲ ಇವತ್ತೂ ಬೇಡ, ಇವತ್ತು ಒಂದು ದಿನ ರೆಸ್ಟ್ ತಗೊಳೋಣ. ಇವತ್ತು ಯುಗಾದಿ ಎಲ್ಲರೂ ರೆಸ್ಟ್ ತೆಗೆದುಕೊಳ್ಳಬೇಕು. ಅವಕಾಶ ಸಿಕ್ಕಾಗ ಹೇಳಿ ಹೇಳ್ತೀವಿ
ರಂಜಾನ್, ಯುಗಾದಿ ಇದೆ ರೆಸ್ಟ್ ತಗೊಳೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

 

Tags:

error: Content is protected !!