ಅಲ್ಪ ಸಂಖ್ಯಾತರಿಗೆ ಬಜೆಟ್ ನಲ್ಲಿ ಮೀಸಲಿಟ್ಟ ವಿಚಾರ.
ಪಾಕಿಸ್ತಾನ ಮಾಡಿದಂತಹ ಜಿನ್ನಾ ಆತ್ಮಕ್ಕೆ ಬಹಳ ಖುಷಿ ಆಗಿದೆ. ಇಂಥವರೆಲ್ಲ ಇರ್ತಾರೆ ಅಂತ ಗೊತ್ತಾಗಿದ್ದರೆ ಅವನು ಪಾಕಿಸ್ತಾನ ಬೇಡ ಅಂತ ಇಲ್ಲೇ ಇರ್ತಿದ್ದ ಎಂದು,ಎಂ ಎಲ್ ಸಿ ಸಿಟಿ ರವಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಜಿನ್ನಾ ಮಾತು ಕೇಳಿ ಪಾಕಿಸ್ತಾನಕ್ಕೆ ಹೋದವರೆಲ್ಲ ಬಡ್ಕೊಳ್ತಾ ಇದ್ದಾರೆ.
ಜಿನ್ನಾ ಅಪ್ಪನಕಿಂತ ಹೆಚ್ಚಿನವರು ಇಲ್ಲೇ ಇದ್ದರೂ ಸುಮ್ಮನೆ ಪಾಕಿಸ್ತಾನಕ್ಕೆ ಹೋದ್ವಿ. ಎಷ್ಟೋ ಊರುಗಳಲ್ಲಿ ಹೆಣ ಹೂಳಲಿಕ್ಕು ಕೂಡ ಸ್ಥಳವಿಲ್ಲ.
ಇನ್ನೊಂದು ಕಡೆ ಕಬರಸ್ಥಾನ ಸ್ಥಾನ ಕಾಂಪೌಂಡ್ ನಿರ್ಮಾಣಕ್ಕೆ 150 ಕೋಟಿ ಬಜೆಟ್ ನಲ್ಲಿ ನೀಡಿದ್ದಾರೆ.
ಅಂಬೇಡ್ಕರ್ ಮತೀಯ ಆಧಾರಿತ ಮೀಸಲಾತಿ ವಿರೋಧ ಮಾಡಿದ್ರು. ಇವರು ಗುತ್ತಿಗೆ ವಿಚಾರದಲ್ಲೂ ಸಾವಿರ ಕೋಟಿ ಕೊಟ್ಟಿದ್ದಾರೆ. ಮಹಮ್ಮದ್ ಅಲಿ ಜಿನ್ನಾ ಆತ್ಮಕ್ಕೆ ಎಷ್ಟು ಖುಷಿಯಾಗಿರುತ್ತೆ ಎಂದರು.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಎಲ್ಲಿದೆ ಸಮಾನತೆ? ಅವರಿಗೆ ದೆಹಲಿ ಚುನಾವಣೆ ನಂತರ ಶೂನ್ಯದ ಮೇಲೆ ಬಹಳ ನಂಬಿಕೆ ಇದೆ ಎಂದರು.