Belagavi

ಮರಾಠಿ ಪುಂಡರ ಮೇಲೆ ಕ್ರಮ ಕೈಗೊಳ್ಳಿ : ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷ ಮಹದೇವ ತಳವಾರ ಆಗ್ರಹ

Share

ಸರ್ಕಾರಿ ಅಧಿಕಾರಿಗಳ ಮೇಲೆ ಪದೇಪದೇ ಪುಂಡಾಟಿಕೆ ನಡೆಸುತ್ತಿರುವ ಮರಾಠಿ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಮಹದೇವ ತಳವಾರ ಆಗ್ರಹಿಸಿದ್ದಾರೆ

ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಿನೇ ದಿನೇ ಬೆಳಗಾವಿಯಲ್ಲಿ ಎಂಇಎಸ್ ಹಾವಳಿ ಹೆಚ್ಚಾಗುತ್ತಿದೆ ಇಂದು ಕಿನಯೆ ಗ್ರಾಮ ಪಂಚಾಯಿತಿಗೆ ಹೋಗಿ ಎಂಇಎಸ್ ಪುಂಡನೊಬ್ಬನು ಅಲ್ಲಿಯ ಪಿಡಿಓ ಪತ್ತಾರ ಎಂಬ ಅಧಿಕಾರಿಗೆ ನೀನು ಮರಾಠಿಯಲ್ಲಿ ಮಾತನಾಡಬೇಕೆಂದು ಧಮಕಿಹಾಕಿದ್ದಾನೆ. ಸಹಾಯಕ್ಕೆ ಬಂದ ಸಿಬ್ಬಂದಿಗೂ ಜೀವ ಬೆದರಿಕೆ ಹಾಕಿದ್ದಾನೆ. ಮೊನ್ನೆ ಅಂಬೇವಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿರುವ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಇದುವರೆಗೂ ಬಂಧನವಾಗಿಲ್ಲ.

ಗಣಾಚಾರಿ ಗಲ್ಲಿಯಲ್ಲಿ ಸಮುದಾಯ ಭವನ ನಿರ್ಮಿಸಲು ಜಾಗೆ ಸರ್ವೆ ಮಾಡಲು ಹೋದಾಗ ಎಂಇಎಸ್ ಮಾಜಿ ನಗರ ಸೇವಕ ರಾಕೇಶ ಪಲ್ಲಂಗೆ ಗುಂಪು ಕಟ್ಟಿಕೊಂಡು ಬಂದು ಜಗಳ ಮಾಡಿ ಹಲ್ಲೆ ಮಾಡಿದ್ದಾನೆ. ಮರಾಠಿ ಪುಂಡರು ಹಲ್ಲೆ ಮಾಡಿದ್ದರೂ ಅಂಬೆವಾಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗಪ್ಪ ಕೊಡ್ಲಿಯಿಂದ ಒತ್ತಾಯಪೂರ್ವಕ ಹೇಳಿಕೆ ಪಡೆಯಲಾಗುತ್ತಿದೆ. ಬೆಳಗಾವಿಯಲ್ಲಿ ಮರಾಠಿಗರಿಂದ ಪದೇ ಪದೇ ಈ ರೀತಿ ದೌರ್ಜನ್ಯಗಳು ಪುಂಡಾಟಕೆಗಳು ನಡೆಯುತ್ತಿದ್ದರೂ ಕ್ರಮಗಳಾಗದೇ ಇರುವುದು ಖಂಡನೀಯ ಇದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿದೆ.

ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಪೊಲೀಸರು ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಹದೇವ ತಳವಾರ ಆಗ್ರಹಿಸಿದರು.

Tags:

error: Content is protected !!