Belagavi

ಬೆಳಗಾವಿಯ ಕುಮಾರಸ್ವಾಮಿ ಬಡಾವಣೆ ಪಕ್ಕದಲ್ಲಿ ಹೊತ್ತಿಕೊಂಡ ಬೆಂಕಿ

Share

ಬೆಳಗಾವಿ:  ಬೆಳಗಾವಿ ನಗರದ ಕುಮಾರಸ್ವಾಮಿ ಬಡಾವಣೆಯ ಪಕ್ಕದಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದಿದೆ.

ಬೆಳಗಾವಿನಗರದ ಕುಮಾರಸ್ವಾಮಿ ಬಡಾವಣೆಯ ಪಕ್ಕದಲ್ಲಿ ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಇಲ್ಲಿ ಅಕ್ಕಪಕ್ಕದಲ್ಲಿ ಮನೆಗಳಿದ್ದು, ಬೆಂಕಿ ಹೊತ್ತಿಕೊಳ್ಳುತ್ತಲೇ, ಜನರಲ್ಲಿ ಆತಂಕ ಮೂಡಿತ್ತು.
ಅಗ್ನಿ ಶಾಮಕ ದಳದ ಸಿಬ್ಬಂದಿಯವರ ಸಮಯಪ್ರಜ್ಞೆಯಿಂದ ಯವುದೇ ಅನಾಹುತ ಸಂಭವಿಸಿಲ್ಲ.

ಅಗ್ನಿಶಾಮಕ ದಳದ ಅಧಿಕಾರಿ ವಾಯ್. ಜಿ ಕೋಲಕಾರ, ಎಂ.ಎಂ ಜಾಕೂಟಿ, ಅಶೋಕ ಪಾಟೀಲ, ಪ್ರಕಾಶ ಪಾಟೀಲ, ಬ್ಯನ್ಸು ಬುಡ್ಡನ್ನವರ, ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Tags:

error: Content is protected !!