Chikkodi

ಜೊಲ್ಲೆ ಎಜುಕೇಶನ ಸೊಸೈಟಿಯ 8 ವಿಧ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆ

Share

ಚಿಕ್ಕೋಡಿ:ಜೊಲ್ಲೆ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ *ಬಸವಜ್ಯೋತಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ 1)ಹೃತೇಶ ನಾಯಿಕ
2)ಅಜಯ ನವಲೆ 3)ಓಂಕಾರ ತೋಡಕರ
4)ಅಭಿಷೇಕ ನಿಜಕರ
5)ಅಭಿಷೇಕ ಪಾರವತೆ
6)ಭರಮಣ್ಣ ಬಾಗಿ 7)ಕಿಶೋರ ಚೌಗಲಾ
8)ಜ್ಯೋತಿಬಾ ಶೇಡಬಾಳೆಯವರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.

ಚಿಕ್ಕೋಡಿ:ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ನಮ್ಮ ಯುವಕರು ಭಾರತಾಂಬೆಯ ಸೇವೆ ಗೈಯಲು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ‌. ತಾಯಿ ಭಾರತಿ ಎಲ್ಲರನ್ನು ಕಾಪಾಡಲಿ, ದೇಶಕ್ಕೆ ನಿಮ್ಮ ಉತ್ತಮ ಸೇವೆ ದೊರಕಲಿ ಎಂದು ಶುಭಹಾರೈಸಲಾಯಿತು.


ವಿದ್ಯಾರ್ಥಿಗಳ ಸಾಧನೆಗೆ ಜೊಲ್ಲೆ ಗ್ರುಪ್ ನ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಶ್ರೀ ಅಣ್ಣಾಸಾಹೇಬ ಶಂಕರ ಜೊಲ್ಲೆ,ಮತ್ತು ಜೊಲ್ಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ನಿಪ್ಪಾಣಿಯ ಜನಪ್ರಿಯ ಶಾಸಕರು ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಸಂಸ್ಥೆಯ ಆಡಳಿತ ಮಂಡಳಿ ,ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Tags:

error: Content is protected !!