Bailahongala

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಲತಾಯಿ ಧೋರಣೆ,

Share

ಸೂರ್ಯಮುಳಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟಿಷ್‌ ರಿಗೆ ಪ್ರಪಂಚದಲ್ಲಿ‌ ಮೊಟ್ಟಮೊದಲಿಗೆ ಸೋಲಿನ‌ ರುಚಿ ತೊರಿಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಷ್ಟ್ರಮಾತೆ ವೀರರಾಣಿ ಕಿತ್ತೂರ ಚನ್ನಮ್ಮ‌ನನವರ ಕಿತ್ತೂರು ಕೋಟೆ, ಜನ್ಮಸ್ಥಳ ಕಾಕತಿ, ಐಕ್ಯಸ್ಥಾನ ಬೈಲಹೊಂಗಲ ಸೇರಿದಂತೆ ಸುಮಾರು 30ಸ್ಥಳಗಳ ಅಭಿವೃದ್ಧಿಗಾಗಿ 17ವರ್ಷಗಳ ಹಿಂದೆ ಸ್ಥಾಪನೆಯಾದ,
ಕಿತ್ತೂರು ಪ್ರಾಧಿಕಾರಕ್ಕೆ ಈ ವರ್ಷದ ಬಜೆಟ್ ದಲ್ಲಿ ನೀವು ಬಿಡಿಗಾಸು ನೀಡಿದೆ ಬಜೆಟ್ ಮಂಡನೆ ಮಾಡಿದ ನಿಮ್ಮ ಮಲತಾಯಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೆವೆ
17ವರ್ಷಗಳಲ್ಲಿ ಒಂದೆ ಒಂದು‌ಕಾರ್ಯ ಕಿತ್ತುರು ಪ್ರಾಧಿಕಾರದಿಂದ ಪೂರ್ಣಗೊಂಡಿಲ್ಲ. 17 ವರ್ಷದಿಂದ ಪ್ರಾಧಿಕಾರಕ್ಕೆ 43ಕೋಟಿ 75 ಲಕ್ಷ ರೂಪಾಯಿ‌ ಅನುದಾನ ನೀಡಿದ ಸರ್ಕಾರಗಳು 9ವರ್ಷದ ಪ್ರಾಧಿಕಾರಕ್ಕೆ ಅಧಿಕೃತವಾಗಿ ಪ್ರಾಧಿಕಾರದಿಂದ 350ಕೋಟಿ ಹಾಗೂ ಇತರೆ ಇಲಾಖೆಯಿಂದ ಅಂದಾಜು 300ಕೋಟಿ ಹಣ ನೀಡಿದ್ದಿರಿ ಇದು ಸ್ವಾಗತಾರ್ಹ. ಆದರೆ ತಾಯಿಯ ಸ್ಥಾನದಲ್ಲಿದ್ದು ಸರ್ವಸ್ವವನ್ನೂ ತನ್ನ ಪ್ರಜೆಗಳಿಗಾಗಿ ದಾರೆ ಎರೆದು ಪ್ರಾಣ ತ್ಯಾಗಮಾಡಿದ ವೀರರಾಣಿ ಚನ್ನಮ್ಮನವರ ಪ್ರಾಧಿಕಾರದ ಬಗ್ಗೆ ಅಸಡ್ಡೆ ತೊರುವದಲ್ಲದೆ ಈ ಬಜೆಟ್ ನಲ್ಲಿ ಒಂದು ಪೈಸೆ ಅನುದಾನ ನೀಡದ ನಿಮ್ಮ ನೀಚ ಬುದ್ದಿಯನ್ನು ಉಗ್ರವಾಗಿ ಖಂಡಿಸುತ್ತೆವೆ.
ಸರ್ಕರದ ಈ ಕ್ರಮದಿಂದ ವೀರರಾಣಿ ಚನ್ನಮ್ಮನವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಿರಿ. ಅಂದು ಬ್ರಿಟೀಷರಿಂದ ಪಡಬಾರದ ಕಷ್ಟ ಅನುಭವಿಸಿದ ತಾಯಿ ಚನ್ನಮ್ಮನವರಿಗೆ ಇಂದಿನ ಪ್ರಜಾಪ್ರಭುತ್ವ ಸರ್ಕಾರ ಬ್ರೀಟಿಷ್ ಸರ್ಕಾರದಂತೆ ನಡೆದುಕೊಳ್ಳುತ್ತಿರುವದು ರಾಷ್ಟ್ರಮಾತೆಗೆ ತೋರಿದ ಅಗೌರವ. ಜನ್ಮಭೂಮಿ ಕಾಕತಿಯಲ್ಲಿ‌ ಚನ್ನಮ್ಮನ ಮೂರ್ತಿಯೊಂದನ್ನು ಬಿಟ್ಟರೆ ಅವರ ಜನ್ಮಸ್ಥಾನದಲ್ಲಿ ಒಂದೆ ಒಂದು ಅಭಿವೃದ್ಧಿ ಇಲ್ಲಾ. ಕಿತ್ತೂರು ಉತ್ಸವ ಒಂದನ್ನು ಬಿಟ್ಟರೆ ಕೋಟೆಯ ರಕ್ಷಣೆಯಾಗಲಿ ಇನ್ನುವರೆಗೆ ನಡೆದಿಲ್ಲ. ಐಕ್ಯಸ್ಥಾನ ಬೈಲಹೊಂಗಲದಲ್ಲಿ ಕಳೆದ 10ವರ್ಷದಿಂದ ಆಮೆಗತಿಯಲ್ಲಿ ಅಲ್ಪಸ್ವಲ್ಪ ಕಾರ್ಯ ನಡೆದಿದ್ದು ಇನ್ನು ವರೆಗೆ ಯಾವದು ಕಾರ್ಯ ಪೂರ್ಣಗೊಳ್ಳದೆ ಇರುವದು ಈ ಭಾಗದ ದುರ್ಧೈವ ಸಂಗತಿ.
ರಾಜ್ಯದಲ್ಲಿರುವ ಎಲ್ಲಾ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೆ‌ ಅಧ್ಯಕ್ಷರಿರುವಾಗ ಕಿತ್ತೂರು ಪ್ರಾಧಿಕಾರಕ್ಕೆ ‌ಮುಖ್ಯಮಂತ್ರಿಗಳು ಯಾಕೆ ಅಧ್ಯಕ್ಷರಾಗಿಲ್ಲ. ಇದೊಂದು ಕಪಟ ನೀತಿ ಅಲ್ಲವೆ. ರಾಯಣ್ಣನವರ ಪ್ರಾಧಿಕಾರ‌ದ ಕಛೇರಿ ವಿಧಾನಸೌಧದ 3ನೇ ಮಹಡಿಯಲ್ಲಿದ್ದರೆ ವೀರ ರಾಣಿ ಚನ್ನಮ್ಮನವರ ಕಿತ್ತೂರು ಪ್ರಾಧಿಕಾರಕ್ಕೆ 17ವರ್ಷದಿಂದ ಕಛೇರಿಯೂ ಇಲ್ಲಾ ಸಿಬ್ಬಂದಿಯಂತು ಇಲ್ಲವೆ ಇಲ್ಲಾ‌ ಈ ಭಾಗದ ಜನಪ್ರತಿನಿಧಿಗಳೆ ಇದು ಚನ್ನಮ್ಮನವರಿಗೆ ಮಾಡಿದ ಅಪಮಾನವಲ್ಲವೆ ಇದನ್ನು ಮೊದಲು ಸರಿಪಡಿಸಿ ಕೆಳಗಿನ ಬೆಡಿಕೆಗಳನ್ನು ಈಡೆರಿಸಬೇಕೆಂದು ನಾಡಿನ‌ಜನತೆ ಓಕ್ಕೂರೂಲಿನಿಂದ‌ ತಮ್ಮನ್ನು ಆಕ್ರೋಶವಾಗಿ ಆಗ್ರಹಿಸುತ್ತೆವೆ.
1)ತಕ್ಷಣ ಸರ್ಕಾರ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200ಕೋಟಿ ಅನುದಾನ ನೀಡಬೇಕು
. 2)ಚನ್ನಮ್ಮನ ಐಕ್ಯಸ್ಥಾನ ರಾಷ್ಟ್ರೀಯ ಸ್ಮಾರಕ್ಕೆ ಕೇಂದ್ರ ಸರ್ಕಾರಕ್ಕೆ‌ ಶಿಪಾರಸ್ಸು ಮಾಡಬೇಕು
3)ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು
4)ಬೈಲಹೊಂಗಲದಲ್ಲಿ ವೀರರಾಣಿ ಕಿತ್ತೂರೂ ಚನ್ನಮ್ಮನವರ ಅಂತರಾಷ್ಟ್ರೀಯ ಬಾಲಕಿಯರ ಸೈನಿಕ ಶಾಲೆ ತೆರೆಯಬೇಕು
5)ಬೈಲಹೊಂಗಲದಲ್ಲಿ ಚನ್ನಮ್ಮನವರ ವೀರ ಜೀವನದ ರಾಕ್ ಗಾರ್ಡನ್ ಕನಿಷ್ಠ ನೂರುಕೋಟಿ ರೂಪಯಿಗಳಲ್ಲಿ ನೂರೂ ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಬೇಕು
6) ಕಿತ್ತೂರು ಕೋಟೆಯನ್ನು ಮರು ಸೃಷ್ಟಿಸುವದು ಹೇಳಿಕೆಯಾಗದೆ ಕಾರ್ಯಪ್ರವರ್ತರಾಗಬೇಕು. 7)ಪ್ರಾಧಿಕಾರದಲ್ಲಿ ಹೇಳಿದಹಾಗೆ ಮರಡಿ ದಿಬ್ಬ, ಕಲ್ಮಠ,‌ನಿಚ್ಚನಕಿ ಸೇರಿದಂತೆ‌ 30ಸ್ಥಳಗಳ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು.
8) ಚನ್ನಮ್ಮನವರ ಜನ್ಮಸ್ಥಳವನ್ನು ಸರ್ಕಾರ ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಬೇಕು
9) ಬೈಲಹೊಂಗಲದ ಚನ್ನಮ್ಮನವರ ಐಕ್ಯ ಸ್ಥಳ ಅಂತರಾಷ್ಟ್ರೀಯ ಪ್ರವಾಸತಾಣವನ್ನಾಗಿಸಲು ಸೂಕ್ತ ನೀಲ‌ ನಕ್ಷೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಲು ಕ್ರಮ ಕೈಗೊಳ್ಳಬೇಕು.
10) ಫೆಬ್ರವರಿ 02 ರಂದು ಆಚರಿಸಿಸುವ ಚನ್ನಮ್ಮನವರ ಸ್ಮರಣೋತ್ಸವವನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಘೋಷಿಸಬೇಕು
11)ಮಹಿಳಾ‌ಸೈನ್ಯ ಕಟ್ಟಿ ನಾಡಿಗೆ ಮಹಿಳಾ ಶಕ್ತಿ ಅನಾವರಣಗೊಳಿಸಿದ ಬೆಳವಡಿ ಮಲ್ಲಮ್ಮನವರ ಪ್ರಾಧಿಕಾರ ಸ್ಥಾಪಿಸಿ ಅಭಿವೃದ್ಧಿ ಪಡೆಸಲು ಕ್ರಮ ಕೈಗೊಳ್ಳಬೇಕು.
ಈ ಎಲ್ಲ ಬೇಡಿಕೆಗಳನ್ನು ಸರ್ಕಾರ‌ಈಡೆರಿಸದಿದ್ದಲ್ಲಿ ರಾಜ್ಯದಲ್ಲಿರುವ ವೀರರಾಣಿ ಚನ್ನಮ್ಮನವರ ಅಭಿಮಾನಿಗಳು ರಾಜ್ಯವನ್ನೆ ಬಂದ ಮಾಡಿ ಅಕ್ರೋಶ ವ್ಯಕ್ತಪಡಿಸಬೇಕಾದಿತು ಎಂದು ತಮಗೆ ಎಚ್ಷರಿಕೆ ನೀಡುತ್ತೆವೆ.

Tags:

error: Content is protected !!