Banglore

ದೆಹಲಿಯಲ್ಲಿ ಕುಮಾರಸ್ವಾಮಿ-ಸತೀಶ ಜಾರಕಿಹೊಳಿ ಡಿನ್ನರ್ ಮೀಟಿಂಗ್???

Share

ರಾಜ್ಯದಲ್ಲಿ ಒಂದೆಡೇ ಹನಿಟ್ಯಾಪ್ ಗದ್ದಲ ಕಂಡು ಬಂದರೇ, ಇನ್ನೊಂದೆಡೆ ದೆಹಲಿಯಲ್ಲಿ ಗುಪ್ತವಾದ ಡಿನ್ನರ್ ಪಾರ್ಟಿ ನಡೆದಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಐತಣಕೂಟದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಭಾಗಿಯಾಗಿದ್ದು , ತೀವ್ರ ಕುತೂಹಲವನ್ನು ಮೂಡಿಸಿದೆ.

ಕೈ ಮಹಾನಾಯಕನ ವಿರುದ್ಧ ಸಮರ ಸಾರಲು ವಿರೋಧಿ ಪಡೆ ಸಿದ್ಧವಾಗಿರುವಾಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲೇ ಔತಣಕೂಟ ಆಯೋಜನೆ ಮಾಡಿದ್ದರು ಎನ್ನಲಾಗಿದೆ. ಆಹ್ವಾನ ಸ್ವೀಕರಿಸಿದ ಸತೀಶ್ ಜಾರಕಿಹೊಳಿ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಸಚಿವ ಸತೀಶ್ ಜಾರಕಿಹೊಳಿ ಕಳೆದ ಎರಡು ದಿನಗಳಿಂದ ದಿಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಅವರು ದಿಲ್ಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಉಭಯ ನಾಯಕರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.ಕಾಂಗ್ರೆಸ್‌, ಜೆಡಿಎಸ್ ನಾಯಕರ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಆದರೆ ಈ ಡಿನ್ನರ್‌ ಮೀಟಿಂಗ್‌ ಆಗಿರುವ ಬಗ್ಗೆ ಸತೀಶ್ ಜಾರಕಿಹೊಳಿ ಅಥವಾ ಕುಮಾರಸ್ವಾಮಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Tags:

error: Content is protected !!