hubbali

ರಾಜ್ಯ ಬಜೆಟ್ ಮುಸ್ಲಿಂರಿಗಾಗಿಯೇ ಮಂಡಿಸಿದ ಬಜೆಟ್ : ಪ್ರಹ್ಲಾದ್‌ ಜೋಶಿ ಆರೋಪ

Share

ಮುಸ್ಲಿಂಮರಿಂದ, ಮುಸ್ಲಿಮರಿಗಾಗಿ, ಮುಸ್ಲಿಂರಿಗೋಸ್ಕರ ಮಂಡಿಸಿದ ಬಜೆಟ್ ಆಗಿದೆ. ಮುಸ್ಲಿಂರಿಗೆ ಮಾತ್ರವೇ ವಿಶೇಷ ಯೋಜನೆ ನೀಡಿರುವುದನ್ನು ನೋಡಿದರೇ ಇದನ್ನು ಪಾಕಿಸ್ತಾನ ಎಂದುಕೊಂಡಿದ್ದಾರೆ ಕಾಂಗ್ರೆಸ್ಸಿಗರು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ರಾಜ್ಯ ಸರ್ಕಾರದ ಬಜೆಟ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಮುಸ್ಲಿಂರಿಗಾಗಿಯೇ ಇರುವ ಬಜೆಟ್ ನ್ನು ರಾಜ್ಯದ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಮದರಸಾ, ಖಬರಸ್ಥಾನ, ಮುಸ್ಲಿಂ ಗುತ್ತಿಗೆದಾರರ ಅಭಿವೃದ್ಧಿಗೆ ಮಾತ್ರವೇ ಹೆಚ್ಚಿನ ಆದ್ಯತೆ ನೀಡಿರುವುದು ನಿಜಕ್ಕೂ ಜನವಿರೋಧಿ ಬಜೆಟ್ ಆಗಿದೆ ಎಂದರು.

ಮುಸ್ಲಿಂರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಅಂತಾರೇ. ಆದರೆ ಮದರಸಾಗಳಲ್ಲಿಯೇ ಅವರಿಗೆ ಅಭಿವೃದ್ಧಿ ಮಾಡುವುದು ನಿಜಕ್ಕೂ ದೇಶದ ಶಾಂತಿಗೆ ಧಕ್ಕೆ ತರುವ ಕಾರ್ಯ ಎಂಬುವುದನ್ನು ರಾಜ್ಯ ಸರ್ಕಾರ ಅರಿತುಕೊಳ್ಳಬೇಕಿದೆ ಎಂದರು.

ಸಿದ್ದರಾಮಯ್ಯನವರು ಮುಂದೆ ಚುನಾವಣೆ ನಿಲ್ಲಲ್ಲ ಅಂತಿದ್ದಾರೆ. ಹಾಗಿದ್ದರೇ ಕೊನೆಯ ಅವಧಿಯಲ್ಲಿ ಆದರೂ ಸತ್ಯವನ್ನು ಹೇಳಿ, ಕೇವಲ ಮುಸ್ಲಿಂ ಸಮುದಾಯದ ಓಲೈಕೆಗಾಗಿ ಸುಳ್ಳು ಹೇಳುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Tags:

error: Content is protected !!