ಎರಡನೇ ಅವಧಿಗೆ ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಸ್ ಟಿ ಪಾಟೀಲ್ ಮರು ಆಯ್ಕೆಗೊಂಡಿದ್ದಾರೆ

ಬಾಗಲಕೋಟೆ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆದ ಸಭೆಯಲ್ಲಿ ಸಂಸದ ಪಿ. ಸಿ. ಗದ್ದಿಗೌಡರ್ ಅವರ ಆಪ್ತರಾಗಿರುವ ಎಸ್. ಟಿ. ಪಾಟೀಲ್ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟು 12 ಜನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದರು.ಜಿಲ್ಲಾ ಚುನಾವಣಾ ಅಧಿಕಾರಿ ಲಿಂಗರಾಜ್ ಪಾಟೀಲ್ ಸಹ ಚುನಾವಣಾ ಅಧಿಕಾರಿ ದೊಡ್ಡನಗೌಡ ಪಾಟೀಲ್ ಲಕ್ಷ್ಮೀನಾರಾಯಣ ಕಾಸಟ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಾಯಿತು
ಸಭೆಯಲ್ಲಿ ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್, ಪರಿಷತ್ ಸದಸ್ಯ ಪಿಎಚ್ ಪೂಜಾರ್, ಹಾಗೂ ಮಾಜಿ ಶಾಸಕರು, ಜಿಲ್ಲೆಯ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.