ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದಲ್ಲಿ ಮಾರ್ಚ್ 18ರಿಂದ 28ರ ವರೆಗೆ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವದಲ್ಲಿ ಮುರಗೋಡ ಶ್ರೀ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಹಿರಿಬಾಗೆವಾಡಿ ಬಡೆಕೊಳ್ಳಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಸೊಗಲ ಕ್ಷೇತ್ರದ ಶ್ರೀ ಲಿಂಗಯ್ಯ ಸ್ವಾಮೀಜಿ, ನೇಸರಗಿಯ ಶ್ರೀ ಚಿದಾನಂದ ಸ್ವಾಮೀಜಿ, ಹುಕ್ಕೇರಿ ಶ್ರೀ ಅಭಿನವ ಮಂಜುನಾಥ ಸ್ವಾಮೀಜಿ ಸೇರಿದಂತೆ ಸಚಿವರು, ಶಾಸಕರು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳುವರು.
ಗ್ರಾಮ ದೇವಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ಪ್ರತಿದಿನ ಪ್ರವಚನ, ಸಾಂಸ್ಕೃತಿಕ, ನಾಟಕಗಳು, ಕುಸ್ತಿ ಮತ್ತು ಕ್ರೀಡೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ ದಿನಾಂಕ 26ರಂದು ಗ್ರಾಮದ ಬೀದಿಗಳಲ್ಲಿ ದೇವಿ ಹೊನ್ನಾಟ ನಡೆಯುತ್ತದೆ ನಂತರ ದೇವಿಯನ್ನು ಸೀಮೆಗೆ ಕಳುಹಿಸುವ ಕಾರ್ಯಕ್ರಮ ಇರುತ್ತದೆ ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಶಿವಾಜಿ ಅಷ್ಟೇಕರ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ರಮೇಶ ಪುಣಜಿ ಇತರರು ಉಪಸ್ಥಿತರಿದ್ದರು.