ನಾಡಿನಾದ್ಯಂತ ಯುವ ಸಮುದಾಯ ಸೇರಿದಂತೆ ಮಕ್ಕಳು ಈಗ ಸಂಭ್ರಮದ ಹೋಳಿ ಹಬ್ಬ ಆಚರಣೆಗೆ ಸಜ್ಜಾಗುತ್ತಿದ್ದು, ಧಾರವಾಡದ ತೋಟಿಲು ಪಟ್ಟಣ ಎಂದೇ ಖ್ಯಾತಿ ಪಡೆದಿರೋ ಕಲಘಟಗಿ ಜನತೆಯು ಕೂಡಾ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ.

ಹೌದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮೆದಾರ ಓಣಿಯಲ್ಲಿ ಈಗಾಗಲೇ 12 ಅಡಿ ಎತ್ತರದ ಬಿದಿರಿನ ಕಾಮ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ಕಾಮದೇವರ ಸ್ಥಳೀಯರು ಪುಜೆ ಮಾಡುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಇಂದು ಮಧ್ಯರಾತ್ರಿ ಕಾಮದೇವರ ದಹನ ನಡೆಯಲ್ಲಿದ್ದು, ಶುಕ್ರವಾರ ಕಲಘಟಗಿ ಜನರು ಹೋಳಿ ಆಡಲು ಸಿದ್ಧತೆ ನಡೆಸಿದ್ದಾರೆ. ಯುವಕರು ಹಾಗೂ ಮಕ್ಕಳು ಕಳೆದೊಂದು ವಾರದಿಂದ ತಮ್ಮ ತಮ್ಮ ಏರಿಯಾಗಳಲ್ಲಿ ತಮಟೆ ಬಾರಿಸುತ್ತ ಕಾಮನ ಹಬ್ಬ ಆಚರಣೆ ಬ್ಯೂಸಿಯಾಗಿದ್ದಾರೆ.
ಜತೆಗೆ ಕಾಮನ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹಲವು ರೀತಿಯ ಬಣ್ಣಗಳು ಮಾರಾಟಕ್ಕೆ ಬಂದಿದ್ದು, ಸಂಭ್ರಮದ ಬಣ್ಣ ಓಕುಳಿ ಆಡಲು ಜನತೆ ಈಗ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯಲ್ಲಿ ಹಲಗಿ ಬಗ್ಗೆ ಬಗ್ಗೆಯ ಕಲರ್ ಬಣ್ಣಗಳಿ, ವಿವಿಧ ರೀತಿಯ ಮುಖಕ್ಕೆ ಹಾಕುವ ಮಾಸ್ಕ್ ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಈ ಬಾರಿ ನರೇಂದ್ರ ಮೋದಿಯವರ ಮಾಸ್ಕ್ ಮಾರಾಟಕ್ಕೆ ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿರೋದು ವಿಶೇಷವಾಗಿದೆ.