ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಶಿವಭಜನಾ ಸಪ್ತಾಹ ಕಾರ್ಯಕ್ರಮ ಏಪ್ರಿಲ್ 6 ರಿಂದ 12ರ ವರೆಗೆ ನಡೆಯಲಿದೆ ಎಂದು ಶ್ರೀ ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ.

ಜೋಡಕುರಳಿ ಸಿದ್ಧಾರೂಢ ಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ, ಪ್ರತಿ ವರ್ಷದಂತೆ ನಡೆಯುವ ಶಿವಭಾಜನಾ ಸಪ್ತಾಹ ಕಾರ್ಯಕ್ರಮ ಏಳು ದಿನಗಳ ಕಾಲ ನಡೆಯಲಿದ್ದು ಏಪ್ರಿಲ್. 6 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶಿವಭಜನಾ ಸಪ್ತಾಹ ಆರಂಭವಾಗಿ ಸತತ 7 ದಿನಗಳ ಕಾಲ ಬೆಳಿಗ್ಗೆ 6 ರಿಂದ ರಾತ್ರಿ 9 ವರೆಗೆ ಶಿವನಾಮ ಸ್ಮರಣೆ ಭಜನಾ ಸಪ್ತಾಹ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಪರಂಪರೆ ಮಠಾಧೀಶರು, ಶರಣರು, ಸಂತರು ಭಾಗವಹಿಸಿದ್ದಾರೆ. ಪ್ರತಿ ದಿನ ಸ್ವಾಮೀಜಿ, ಶರಣರಿಂದ ಪ್ರವಚನ ನಡೆಯುತ್ತದೆ. ವಾದ್ಯ ಮೇಳ ಸಂಗೀತದೊಂದಿಗೆ ವೈಭವದ ಕಾಯಕ್ರಮ ಜರುಗುತ್ತವೆ.
ಕೊನೆಯ ದಿನ 12 ರಂದು ಸಾಯಂಕಾಲ ಶ್ರೀ ಸಿದ್ದಾರೂಢ ಮಹಾರಾಜರ ರಥೋತ್ಸವ ಕಾರ್ಯಕ್ರಮ ಜರುಗುತ್ತದೆ. ದಿನಾಂಕ 13 ರಂದು ಸಂಜೆ ವೇಳೆಗೆ ಕೌದಿ ಪೂಜೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗುತ್ತದೆ. ಪ್ರತಿ ದಿನ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಬೈಟ್ : ಶ್ರೀ ಚಿದಾನಂದ ಭಾರತಿ ಸ್ವಾಮೀಜಿ, ಸಿದ್ದಾರೂಢ ಮಠ ಜೋಡಕುರಳಿ.