ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಸಹಾಯಕ ಅಭಿಯಂತರ ಇಬ್ಬರೂ ಸೇರಿ ತಮ್ಮ ಮನಸ್ಸಿಗೆ ಬದಂತೆ ದರ್ಬಾರ್ ಅಧಿಕಾರ ನಡೆಸುತ್ತಿದ್ದಾರೆ. ಇದು ಖಂಡನೀಯ ಎಂದು ಪುರಸಭೆ ಅಧ್ಯಕ್ಷ ಶಾಂತವ್ವ ಗೋಕಾಕ್ ಆಕ್ರೋಶ ಹೊರಹಾಕಿದ್ದಾರೆ.

ಮುಗಳಖೋಡ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಮಟ್ಟದಿಂದ ನಡೆಯುತ್ತಿವೆ. ಈ ಹಿಂದೆ ನಡೆಸಲಾಗಿರುವ ಕಾಮಗಾರಿಗಳು ಕಳಪೆಯಾಗಿದ್ದರೂ ಸಹ ಅಧಿಕಾರಿಗಳು ಸಮರ್ಪಕ ಪರೀಶಿಲನೆ ನಡೆಸದೆ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಕೆಂಪಣ್ಣ ಅಂಗಡಿ ಆರೋಪಿಸಿದ್ದಾರೆ. ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪುರಸಭೆ ಸದಸ್ಯ ರಾಜಶೇಖರ ನಾಯಿಕ ಹಾಗು ಚೇತನ ಯಡವನ್ನವರ, ನಮ್ಮ ಗಮನಕ್ಕೆ ತರದೇ ತಾವು ನಡೆಸುತ್ತಿರುವ ಈ ಅಂಧ ದರ್ಬಾರ್ ಆಡಳಿತ ವಿರೋಧ ನೀತಿಯಾಗಿದೆ. ಪರಮಾಧಿಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ.
ಅಲ್ಲದೆ,
ನಾಳೆಯ ದಿನ ಮಾನ್ಯ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು. ಆದರೆ ಮುಖ್ಯಾಧಿಕಾರಿ ಉದಯಕುಮಾರ್ ಘಟಕಾಂಬಳೆ, ನಾವು ಸರಕಾರದ ನಿಯಮದನುಸಾರ ಕಾರ್ಯನಿರ್ವಹಿಸುತ್ತಿದ್ದು, ಯಾವುದರಲ್ಲಿಯೂ ಪರಮಾಧಿಕಾರ ಧೋರಣೆ ನಡೆಸಿಲ್ಲ ಎಂದು ಪ್ರತಿಕ್ರಿಯಿಸಿದರು.
ಒಂದೆಡೆ ಪುರಸಭೆ ಸದಸ್ಯರು ಕಳಪೆ ಕಾಮಗಾರಿಯ ಆರೋಪ ಮಾಡುತ್ತಿದ್ದಂತೆ, ಪುರಸಭೆ ವಾರ್ಡ್ ಸಂಖ್ಯೆ 14 ರಲ್ಲಿ ರಸ್ತೆ ಡಾಂಬಕ ಡಾಂಬರೀಕರಣದ ಬಗ್ಗೆ ಪುರಸಭೆ ಉಪಾಧ್ಯಕ್ಷೆ ಗಂಗವ್ವ ಬೆಳಗಲಿ ರಸ್ತೆ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅದೇ ರೀತಿ ವಾರ್ಡ್ ಸಂಖ್ಯೆ 16 ರಲ್ಲಿ ನಿರ್ಮಾಣ ಮಾಡಿರುವ ಜಲ ಕುಟುಂಬಗಳು ಸಹ ಹೇಳಲಾಗದಷ್ಟು ಕಳಪೆ ಮಟ್ಟದಿಂದ ನಿರ್ಮಾಣವಾಗಿರುವುದು ಪುರಸಭೆ ಸದಸ್ಯರು ಮಾಡುತ್ತಿರುವ ಆರೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಭಾಗಶಃ ಜಲಕುಂಭಗಳು ಕಳಪೆ ಕಾಮಗಾರಿಯ ಹಣೆಪಟ್ಟಿಯನ್ನು ಹೊತ್ತು ನಿಂತಿವೆ. ಈ ಕಾರಣಕ್ಕಾಗಿಯೇ ಪುರಸಭೆ ಸದಸ್ಯರು ಈ ಹಿಂದೆ ಕಾಮಗಾರಿಯನ್ನು ಪರಿಶೀಲನೆ ಮಾಡದೆ ಬಿಲ್ ಪಾಸ್ ಮಾಡದಿರುವಂತೆ ಮನವಿ ಸಲ್ಲಿಸಿದ್ದರು. ಇದನ್ನೆಲ್ಲ ನೋಡಿದರೆ ಬೇಲಿಯೇ ಎದ್ದು ಹೊಲವನ್ನು ಮೈಯದರೆ ನೋಡಿದರೆ ಬೇಲಿಯೇ ಎದ್ದು ಹೊಲವನ್ನು ಮೈಯದರೆ
ಬೆಳೆಯ ಗತಿಯೇನು ಎನ್ನುವಂತಾಗಿದೆ?