ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ನಗರದ ಎಲ್ಲ ಸಮುದಾಯದ ಮುಖಂಡರು ಯುವಕರು ವಿವಿಧ ಸಂಘ ಸಂಸ್ಥೆಗಳ ಶಾಂತಿ ಸಭೆ ನಡೆಯಿತು.

ಸಾನಿಧ್ಯವನ್ನು ಮುರುಸಾವಿರ ಮಠದ ಗುರುಸಿದ್ಧ ಶ್ರೀ ರಾಜ ಯೋಗೇಂದ್ರ ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ವಹಿಸಿದರು.
ಈ ಶಾಂತಿ ಸಭೆಯಲ್ಲಿ ಎಲ್ಲ ಧರ್ಮದ ಧರ್ಮ ಗುರುಗಳು ಸೇರಿದಂತೆ ನಗರದ ಎಲ್ಲ ಗಣ್ಯರು ನೂರಾರು ಯುವಕರು ಉಪಸ್ಥಿತರಿದ್ದರು. ಶಾಂತಿ ಸಭೆಯಲ್ಲಿ ಹು- ಧಾ ಪೊಲೀಸ್ ಕಮಿಷನರ್ ಭಾವೈಕ್ಯತೆ ಸಾರುವ ಹಾಡನ್ನು ಹಾಡಿದರು.