ಇತ್ತಿಚೆಗೆ ಬೆಟ್ಟಿಂಗ್ ಮೂಲಕ ಜನ ಹಣ ನೆಮ್ಮದಿ ಕಳೆದುಕೊಂಡು ಹಾಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಬೆಟ್ಟಿಂಗ್ ಆ್ಯಪ್ ನಿರ್ಭಂಧಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಲಿಷ್ಠ ಭಾರತ ನಿರ್ಮಾಣ ಸೇನೆ ಸದಸ್ಯರು ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ ಗಳು, ಇಸ್ಪೀಟ್ ಆಟ ಆಡಿಸುವ ಆ್ಯಪ್ ಸೇರಿದಂತೆ ವಿವಿಧ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ನಿರ್ಬಂಧ ಮಾಡಬೇಕು ಎಂದು ಆಗ್ರಹಿಸಿದರು.

ಆ್ಯಪ್ ಗಳ ಮೂಲಕ ಅದೆಷ್ಟೋ ಜನ ಆಟವಾಡಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗೆ ಕಡಿವಾಣ ಹಾಕುವಂತೆ ಸಿಎಂ, ಪ್ರಧಾನಿಗೆ ಮನವಿ ಮಾಡಿದರು.
..