ಖಾನಾಪೂರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಬೀಡಿ -ಕಿತ್ತೂರು ಮುಖ್ಯ ರಸ್ತೆಯ ಬದಿಯಲ್ಲಿ ಎಸೆಯಲಾಗುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಜನರು, ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಕೂಡ ಗ್ರಾ.ಪಂ. ಅಧಿಕಾರಿಗಳಾಗಲಿ, ಪಿಡಿಓಗಳಾಗಲಿ ಕ್ಯಾರೆ ಎನ್ನುತ್ತಿಲ್ಲ.

ಪ್ರತಿನಿತ್ಯವೂ ಸಾವಿರಾರು ಜನ ಸಂಚರಿಸುವ ಈ ರಸ್ತೆಯ ಮೇಲೆ ದುರ್ವಾಸನೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪರಿಸ್ಥಿತಿ ಆದರೂ ಕೂಡಾ ಬೀಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸುತ್ತಿಲ್ಲ ಈ ರಸ್ತೆಯು ಮೊದಲೇ ತಿರುವಿನಿಂದ ಕೊಂಡಿದೆ ಕಸದ ಮೇಲೆ ನಾಯಿಗಳು ಬೇಕಾಬಿಟ್ಟಿ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಇದ್ದು
ಈ ರಸ್ತೆಯ ಬದಿಯಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಸ್ಥಳದಲ್ಲೇ ಚಿಕ್ಕದಾದ ಕೆರೆ ಕೂಡಾ ಇದೆ ತಾಜ್ಯದ ಕಲುಷಿತ ನೀರು ಆ ಕೆರೆಯಲ್ಲಿ ಮಿಶ್ರಣಗೊಂಡು ಹಾಳಾಗುತ್ತಿದೆ
ಇದರ ಬಗ್ಗೆ ಅರಹಾನ ಎಂಬ ಪ್ರವಾಸಿ ಮಾತನಾಡಿ ಬೀಡಿ ಗ್ರಾಮ ಪಂಚಾಯಿತಿಯಿಂದ ಸಂಪೂರ್ಣ ಕಸ ಇಲ್ಲಿ ತಂದು ಎಸೆಯಲಾಗುತ್ತಿದೆ ನಾಯಿಗಳ ಕಾಟ ಕೂಡಾ ಜಾಸ್ತಿ ಇದೆ ದುರ್ವಾಸನೆಯಿಂದ ಕುಡಿದ ವಾತಾವರಣ ತಿರುವು ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಇದರ ಬಗ್ಗೆ ಇನ್ ನ್ಯೂಸ್ ಇದರ ಮೊದಲು ಕೂಡಾ ನ್ಯೂಸ್ ಪ್ರಸಾರ ಮಾಡಿತು ಆದರೆ ನೋಡಿ ಇಲ್ಲಿನ ಪರಿಸ್ಥಿತಿ ಹೇಗಿದೆ ನೋಡಿ ಎಂದು ತಮ್ಮ ಅಳಲು ತೋಡಿಕೊಂಡರು.
ಖಾನಾಪೂರ ತಾಲೂಕಾ ಮಟ್ಟದ ಅಧಿಕಾರಿಗಳು, ಬೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಅಂತೂ ಇಂತೂ ಗಮನಿಸಿಲ್ಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರಾದರೂ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಒಳ್ಳೆಯ ಸ್ವಚ್ಛ ವಾತಾವರಣದ ಬಗ್ಗೆ ಪರಿಗಣಿಸುತ್ತಾರೆಯೂ ಕಾದು ನೋಡಬೇಕಿದೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ