ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಇವರ ಪುತ್ರಿ ಕೃತಿಕಾ ಅನೀಲ ಪಾಟೀಲ ಇವರು ಅನಾರೋಗ್ಯದಿಂದ ನಿಧನ ಹೊಂದಿದ್ದ ನಿಮಿತ್ಯ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ರೋಷಣ ಅಹ್ಮದ ಹಾಗೂ ಜಿಲ್ಲಾ ಪೋಲಿಸ ಪ್ರಮುಖ ಡಾ. ಭೀಮಾಶಂಕರ ಗುಳೆದ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಇವರು ಶಾಸಕ ರಾಜು ಕಾಗೆ ಇವರ ಉಗಾರದ ನಿವಾಸದಲ್ಲಿ ಭೇಟಿನೀಡಿ ಸಾಂತ್ವನ ಹೇಳಿದರು.

ಈ ವೇಳೆ ಚಿಕ್ಕೋಡಿ ಎ.ಸಿ ಉಪವಿಭಾಗೀಯ ಅಧಿಕಾರಿಯಾದ ಸುಭಾಷ ಸಂಪಗಾಂವಿ, ತಹಶೀಲ್ದಾರ ರಾಜೇಶ ಬುರ್ಲಿ, ಡಿ.ವೈ.ಎಸ್.ಪಿ ಪ್ರಶಾಂತ ಮುನ್ನೋಳಿ, ಸಿ.ಪಿ.ಐ ಸಂತೋಷ ಹಳ್ಳೂರ, ಸೇರಿದಂತೆ ಅನೇಕರು ಇದ್ದರು.