ಕಾಗವಾಡ : ರಾಜ್ಯ ಸರಕಾರದ ವಿಕಲಚೇತನರ ಹಾಗೂ ಹಿರಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಸನ್ ೨೦೨೩-೨೦೨೪ ನೇ ಸಾಲಿನ ೧೮ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಶಾಸಕ ರಾಜು ಕಾಗೆ ಇವರ ಹಸ್ತೆಯಿಮದ ವಿತರಿಸಲಾಯಿತು.

ಶನಿವಾ ರಂದು ಶಾಸಕ ರಾಜು ಕಾಗೆ ಇವರ ಉಗಾರದ ಪ್ರಧಾನ ಕಛೇರಿಯಲ್ಲಿ ತಾಲೂಕಿನ ೧೮ ವಿಕಲಚೇತನರ ಫಲಾವಣೆಗಳನ್ನು ಒಂದುಗೂಡಿಸಿ ಕಾಗವಾಡ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ದೀ ಅಧಿಕಾರಿ ಸಂಜುಕುಮಾರ ಸದಲಗೆ, ವಿಕಲಚೇತನರ ಇಲಾಖೆಯ ಅಧಿಕಾರಿ ವಿಶ್ವನಾಥ ಮೋರೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ ಇವರ ಮುಖ್ಯ ಉಪಸ್ಥೀತಿಯಲ್ಲಿ ವಾಹನ ವಿತಿರಿಸಲಾಯಿತು.
ಕಾರ್ಯಕ್ರಮದಲ್ಲಿ ಅರಳಿಹಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಬಸಣ್ಣಗೌಡಾ ಪಾಟೀಲ, ಮಾಜಿ ತಾಲೂಕಾ ಪಂಚಾಯತ ಸದಸ್ಯ ವಸಂತ ಖೋತ, ಮುಖಂಡರಾದ ಸಂಜಯ ಸಲಗರೆ, ರಾಜು ಮದಣೆ, ಸೇರಿದಂತೆ ಇನ್ನುಳಿದ ಗ್ರಾಮಗಳ ಕಾರ್ಯಕರ್ತರು ಮುಖಂಡರು ಇದ್ದರು.
ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಮಾತನಾಡಿ ಮಹಿಳಾ ರಾಷ್ಟಿಯ ದಿನಚರಣೆ ಅಂಗವಾಗಿ ರಾಜ್ಯ ಸರಕಾರದ ವತಿಯಿಂದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಲಾಗುತ್ತಿದ್ದು ಶಾಸಕರ ಹಸ್ತೆಯಿಂದ ವಾಹನಗಳು ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ