ರಾಜ್ಯ ಬಜೆಟನ್ನು ಹಲಾಲ್ ಬಜೆಟ್ ಎಂದ ಬಿಜೆಪಿಗರಿಗೆ ಶಾಸಕ ವಿಜಯಾನಂದ ಕಾಶಪ್ಪನ್ನವರ ತೀರುಗೇಟು ನೀಡಿದ್ದು, ಹಲಾಲ್ ಎಂದರೇ ಪರಿಶುದ್ಧವಾದ್ದದ್ದು ಎಂದರ್ಥ. ಸಿದ್ಧರಾಮಯ್ಯನವರು ಪರಿಶುದ್ಧವಾದ ಬಜೆಟ್ ನೀಡಿದ್ದಾರೆ ಎಂದರು.

ಹಲಾಲ್ ಬಜೆಟ್ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದು, ಬಿಜೆಪಿಯವರದ್ದು ಕೇವಲ ಹೊಯ್ಯ್ಕೋಳೋದೆ ಕೆಲಸ ಎಂದಿದ್ದಾರೆ. ಹಲಾಲ್ ಎಂದರೆ ಪರಿಶುದ್ಧವಾದದ್ದು ಎಂದರ್ಥ.ಮುಖ್ಯಮಂತ್ರಿಗಳು ಪರಿಶುದ್ಧ ಬಜೆಟ್ ಅನ್ನೇ ಕೊಟ್ಟಿದ್ದಾರೆ.ಗ್ಯಾರಂಟಿ ಯೋಜನೆ ಕೊಟ್ಟಿರೋದು.ಸಮರ್ಪಕವಾಗಿ ಜನರಿಗೆ ಮುಟ್ಟಿಸೋಕೆ ಎಂದ ಅವರು ಆಯೋಗದಲ್ಲಿ ಮೊನ್ನೆ ಸಿಎಂ ಇದನ್ನು ಮುಂದುವರಿಸಿಕೊಂಡು ಹೋಗಿ ಎಂದಿದ್ದಾರೆ. ಪ್ರತಿಯೊಬ್ಬ ಮಹಿಳೆಯ ಅಕೌಂಟಿಗೆ 2000 ಹೋಗ್ತಿದೆ. ಒಂದು ಮತಕ್ಷೇತ್ರದಲ್ಲಿ ಒಂದು ವರ್ಷಕ್ಕೆ 250 ಕೋಟಿ ರೂ ಆಗುತ್ತೆ. 224 ಕ್ಷೇತ್ರಗಳಿವೆ ಎಷ್ಟಾಯ್ತು ದುಡ್ಡು ಖರ್ಚಾಯಿತು? ಇದು ಅಭಿವೃದ್ಧಿ ಅಲ್ವಾ? ಎಂದು ಬಿಜೆಪಿ ನಾಯಕರಿಗೆ ಕಾಶಪ್ಪನ್ನವರ ಪ್ರಶ್ನಿಸಿದರು.