Chikkodi

ನೂತನ ಶಾದಿ ಮಹಲ್‌ ಲೋಕಾರ್ಪಣೆಗೊಳಿಸಿದ ಶಾಸಕ ಗಣೇಶ ಹುಕ್ಕೇರಿ

Share

ಚಿಕ್ಕೋಡಿ:ಮಾಂಜರಿ ಗ್ರಾಮದಲ್ಲಿ 45 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಶಾದಿ ಮಹಲ್ ವನ್ನು ಶಾಸಕ ಗಣೇಶ ಹುಕ್ಕೇರಿ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ಸಮುದಾಯ ಸೌಕರ್ಯಗಳ ಅಭಿವೃದ್ಧಿ ನಮ್ಮ ಪ್ರಮುಖ ಗುರಿಗಳಲ್ಲೊಂದಾಗಿದೆ. ವಿಧಾನಪರಿಷತ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ 50 ಲಕ್ಷ ರೂ ವೆಚ್ಚದಲ್ಲಿ ಸದಲಗಾ ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಗೊಂಡಿದೆ.ಶಮನೆವಾಡಿ ಗ್ರಾಮದಲ್ಲಿ 17 ಲಕ್ಷ ರೂ ಅನುದಾನದಲ್ಲಿ ಮಸೀದಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ.ಇವತ್ತು ಮಾಂಜರಿ ಗ್ರಾಮದಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಶಾದಿ ಮಹಲ್ ಸಮಾಜದ ಜನರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪಾಂಡುರಂಗ ಮಾನೆ ಮಾತನಾಡಿ, ಶಾದಿ ಮಹಲ್‌ ನಿರ್ಮಾಣದಿಂದ ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗಿದೆ. ಈ ಹಿಂದೆ ದೊಡ್ಡ ಸಮಾರಂಭ ಆಯೋಜಿಸಲು ಸೂಕ್ತ ಸೌಕರ್ಯಗಳ ಕೊರತೆಯಿತ್ತು. ಹೊಸ ಶಾದಿ ಮಹಲ್ ನಿರ್ಮಾಣದೊಂದಿಗೆ ಈಗ ಜನರು ಸಮಾರಂಭ ನಡೆಸಬಹುದು. ಈ ಕಾರ್ಯ ಸಾಧನೆಗೆ ಶ್ರಮಿಸಿದ ಶಾಸಕ ಗಣೇಶ ಹುಕ್ಕೇರಿ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಪುರಸಭೆ ಉಪಾಧ್ಯಕ್ಷ ಇರ್ಫಾನ್ ಬೇಪಾರಿ,ಸದಸ್ಯಗುಲಾಬಹುಸೇನ ಬಾಗವಾನ, ಜಾಕೀರ ತರಾಳ, ಶಮಸೇರ ಮತ್ತೆಬಾಯಿ, ಅಪ್ಪಾ ಮುಲ್ಲಾ ಸೇರಿದಂತೆ ಮುಸ್ಲಿಂ ಸಮಾಜ ಬಾಂಧವರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!