ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈಗಾಗಲೇ ಧಾರವಾಡ ಜಿಲ್ಲಾಧಿಕಾರಿ ದಿವ್ಯಫ್ರಭು ಅವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಹಿನ್ನಲೆಯಲ್ಲಿ, ಧಾರವಾಡದ ತಾಲ್ಲೂಕಿನ ಮನಗುಂಡಿ ಗ್ರಾಮ ಪಂಚಾಯತಿ ನೀರಿನ ಸಮಸ್ಯೆ ನಿವಾರಿಸಲು ಸಜ್ಜಾಗಿ ನಾಲ್ಕನೇ ಬೊರವೇಲ್ ರಿಪೇರಿ ಮಾಡಿಸುವ ಮೂಲಕ ಕ್ರಮ ಕೈಗೊಂಡಿದೆ.

ಹೌದು ಈಗಾಗಲೇ ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದಲ್ಲಿ ಮೂರು ಬೊರವೇಲ್‌ಗಳು ಗ್ರಾಮಕ್ಕೆ ನೀರನ್ನು ಒದಗಿಸುತ್ತಿದ್ದು, ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಈಗ ನಾಲ್ಕನೇ ಬೊರವೆರಲ್‌ನ್ನು ರಿಪೇರಿ ಮಾಡಿ ಗ್ರಾಮಕ್ಕೆ ನೀರು ಪೂರೈಸಲು ಸಿದ್ಧ ಮಾಡಲಾಗಿದೆ. ಮನಗುಂಡಿ ಗ್ರಾಮದ ಜನರು ಸೇರಿದಂತೆ ಜಾನುವಾರಗಳು ಬೊರಬೇಲ್ ನೀರನ್ನೇ ಬಹುತೇಕ ಅವಲಂಬಿಸಿದ್ದು, ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೊರವೇಲ್ ರಿಪೇರಿ ಕೈಗೊಂಡು ಸಕ್ಸಸ್ ಕೂಡಾ ಆಗಿದೆ. ಇನ್ನೂ ಪಂಚಾಯತಿಯ ಈ ಮುಂಜಾಗ್ರತಾ ಕ್ರಮಕ್ಕೆ ಗ್ರಾಮಸ್ಥರು ಕೂಡಾ ಮೆಚ್ಚಿಕೊಂಡಿದ್ದಾರೆ.