ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪ್ರಾರಂಭ ಅದರ ಒಂದು ಭಾಗದಂತೆ “ಬದುಕೆಂಬುದು ಒಂದು ಪರೀಕ್ಷೆ” ಎಂದು ನಂದಗಡ ಪೋಲಿಸ್ ಠಾಣೆಯ ಹವಾಲ್ದಾರ್ ನಾಗರಾಜ್ ಬೆಳವಡಿ ಅವರು ತಮ್ಮ ಕವಿತೆಯಿಂದ ಮುಂದಿನ ನುಡಿಗಳನ್ನು ಸಾದರ ಪಡಿಸಿದ್ದಾರೆ

ಸದಾ ಒಂದಲ್ಲ ಒಂದು ಕವಿತೆಯನ್ನು ರಚಿಸಿ ಖಾನಾಪೂರ ತಾಲೂಕಿನ ಪರಂಪರೆ ಮತ್ತು ತಾಲೂಕಿನ ಸ್ಥಿತಿ ಗತಿಗೆ ತಕ್ಕಂತೆ ಕವಿತೆ ಸದರ ಪಡಿಸಿರುವ ನಂದಗಡ ಪೋಲಿಸ್ ಠಾಣೆಯ ಹವಾಲ್ದಾರ್ ನಾಗರಾಜ್ ಬೆಳವಡಿ ಅವರು ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ ತನ್ನ ಕರ್ತವ್ಯದ ನಡುವೆಯೂ ಹವಾಲ್ದಾರ್ ನಾಗರಾಜ್ ಬೆಳವಡಿ ಅವರು ರಚಿಸಿದ ಕವಿಯನ್ನು ನೋಡಿ
ಬದುಕೆಂಬುದು ಒಂದು ಪರೀಕ್ಷೆ
ಹಲವಾರು ಸವಾಲುಗಳ ದೀಕ್ಷೆ ಸಮಸ್ಯೆಗಳಿಗೆ ಕೊನೆಯಿಲ್ಲ
ಉತ್ತರಿಸಬೇಕು ಅವುಗಳಿಗೆಲ್ಲ
ಚಂದವಾಗುವುದು ಬಾಳೆಲ್ಲ
ಬದುಕೆಂಬುದು ಒಂದು ಪರೀಕ್ಷೆ
ಹಲವಾರು ಸವಾಲುಗಳ ದೀಕ್ಷೆ ಉತ್ತರವಿಲ್ಲದ ಪ್ರಶ್ನೆ ಇಲ್ಲ
ಪರಿಹಾರವಿಲ್ಲದ ಸಮಸ್ಯೆಯಿಲ್ಲ
ಹುಡುಕುತ್ತ ಕಳೆಯಬೇಕು ಜೀವನಪೂರ್ತಿ ನಾವೇಲ್ಲ
ಬಂದುಕೆಂಬುದು ಒಂದು ಪರೀಕ್ಷೆ
ಹಲವಾರು ಸವಾಲುಗಳ ದೀಕ್ಷೆ
ಹರಿಯುವ ನದಿಗೆ ಮಾಡಿಲ್ಲ ಯಾರು ದಾರಿ
ಅದು ದೂರುತ್ತ ಕೂರಲಿಲ್ಲ ಕಾಣಲಿಲ್ಲವೆಂದು ದಾರಿ
ತನ್ನಿಷ್ಟದಂತೆ ಹರಿದು ಮುಟ್ಟುವುದು ತನ್ನ ಪರಮೋಚ್ಚ ಗುರಿ
ಹೀಗೆ ಪರೀಕ್ಷೆ ಪ್ರಾರಂಭದಿಂದ ಜೀವನ ಪರೀಕ್ಷೆಯವೆಗೆ ತನ್ನ ಕವಿತೆ ಮೂಲಕ ಅರ್ಥ ವಾಗುವ ರೀತಿಯಲ್ಲಿ ರಚಿಸಿ ವಿದ್ಯಾರ್ಥಿಗಳೊಂದಿಗೆ ಹಿರಿಯರಿಗೂ ಜೀವನದಲ್ಲಿ ಬರುವ ಪರೀಕ್ಷೆಗೆ ಉತ್ತಮ ಸಂದೇಶ ಸಾರುವ ನಿಟ್ಟಿನಲ್ಲಿ ಉತ್ತರ ಇದೆ ಅಂತ ಆತ್ಮಧೈಯ ತುಂಬಿದ ಕವಿತೆ ಸದರ ಪಡಿಸಿದ್ದಾರೆ ಆದ್ದರಿಂದ ಎಲ್ಲರೂ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ