ನಿಪ್ಪಾಣಿ: ಜೊಲ್ಲೆ ಗ್ರುಪ್ದಿಂದ ಯಕ್ಸಂಬಾದ ಬೀರೇಶ್ವರ ಕೋ-ಆಪ್. ಕ್ರೆಡಿಟ್ ಸೊಸೈಟಿ ಮತ್ತು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಯುಕ್ತಾಶ್ರಯದಲ್ಲಿ ಏ.4 ರಿಂದ ಐದು ದಿನಗಳ ಕೃಷಿ ಉತ್ಸವವನ್ನು ಆಯೋಜಿಸಲಾಗಿದೆ. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮಾರ್ಗದರ್ಶನದಲ್ಲಿ ಹಾಲಸಿದ್ಧನಾಥ ಕಾರ್ಖಾನೆಯಲ್ಲಿ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯುವ ಉತ್ಸವ ನಡೆಯಲಿದೆ. ಇದರಡಿಯಲ್ಲಿ ಕೃಷಿ ವಸ್ತುಪ್ರದರ್ಶನ ಹಾಗೂ ಪೂರಕ ನಿರ್ವಹಣೆ ಈ ಭಾಗದಲ್ಲಿ ಸಮಸ್ತ ರೈತಬಾಂಧವರಿಗೆ ಮಾರ್ಗದರ್ಶಕವಾಗಲಿದೆ ಎಂದು ಜೊಲ್ಲೆ ಗ್ರುಪ್ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ಕಾರ್ಖಾನೆಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿದಿನ ಮೂರು ಅವಗಳಲ್ಲಿ ನಡೆಯುವ ಈ ಉತ್ಸವದಲ್ಲಿ ಬೆಳಿಗ್ಗೆ ಕಬ್ಬು, ಕೃಷಿ ಬೇಸಾಯ, ಉತ್ಪಾದನೆ, ಪಶುಪಾಲನೆ, ಹಾಲು ಉತ್ಪಾದನೆ, ಕೋಳಿ ಸಾಕಾಣಿಕೆ, ಸಾವಯವ ಕೃಷಿ ಕುರಿತು ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನದ ಅವಯಲ್ಲಿ ವಿವಿಧ ಸ್ಪರ್ಧೆಗಳು, ವಿಚಾರ ಸಂಕಿರಣಗಳು, ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಂಗೀತ, ಹಾಸ್ಯ, ಜಾನಪದ ಸಂಗೀತ ಮತ್ತು ಆಳ್ವಾಜ್ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷಿ, ನೀರು, ಮಣ್ಣು, ಬೀಜಗಳ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಲಾಗುವುದು. ವಸ್ತುಪ್ರದರ್ಶನವು ರೈತರಿಗೆ ಮಾತ್ರವಲ್ಲದೆ ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗಿದೆ.
ವಿಜಯ ರಾವುತ ಮಾತನಾಡಿ 10 ಎಕರೆ ವಿಸ್ತೀರ್ಣದ ಉತ್ಸವದಲ್ಲಿ ಕೃಷಿ, ಆಹಾರ, ಗ್ರಾಹಕ, ಆಟೋಮೊಬೈಲ್ ಮತ್ತು ಕೃಷಿ ಪರಿಕರಗಳಂತಹ ಸುಮಾರು 250 ಮಳಿಗೆಗಳನ್ನು ಇರಲಿವೆ. ಉತ್ಸವದಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ತಜ್ಞರು ಉಪಸ್ಥಿತರಿರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಹಕಾರಿ ಕಾಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ಸಮಿತ ಸಾಸನೆ, ಪ್ರಕಾಶ ಶಿಂಧೆ, ಜಯವಂತ ಭಾಟಲೆ, ರಾಜು ಗುಂಡೇಶಾ, ರಮೇಶ ಪಾಟೀಲ, ಶ್ರೀಕಾಂತ ಬನ್ನೆ, ಜಯಕುಮಾರ ಖೋತ, ರಾವಸಾಹೇಬ್ ಫರಾಳೆ, ಸುಹಾಸ್ ಗುಗೆ, ಶರದ್ ಜಂಗಟೆ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪವನ ಪಾಟೀಲ ವಂದಿಸಿದರು.