ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ -46 ರಾಮತೀರ್ಥ ನಗರದ ಅಭಿವೃದ್ಧಿ ಕಾಮಗಾರಿಗಳ ಜಂಟಿ ಅನುಮೋದನಾ ಸಭೆ ನಡೆಯಿತು
ಈ ಹಿನ್ನೆಲೆಯಲ್ಲಿ ನಗರಸೇವಕ ಹನುಮಂತ ಕೊಂಗಾಲಿ ಅವರು ರಹವಾಸಿಗಳಿಗೆ ಹೋಳಿ ಹಬ್ಬದ ಸುಸಂದರ್ಭದಲ್ಲಿ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.

ರಾಮತೀರ್ಥ ನಗರ ಹತ್ತಾಂತರ ಪ್ರಕ್ರಿಯೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಶ್ರೀಮತಿ ಬಿ , ಶುಭಾ ಹಾಗೂ ಬುಡಾ ಆಯುಕ್ತರು ಶ್ರೀ ಶಕೀಲ್ ಅಹ್ಮದ್, ಮತ್ತು ನಗರಸೇವಕ ಹಣಮಂತ ಕೊಂಗಾಲಿ ನೇತೃತ್ವದಲ್ಲಿ ಪಾಲಿಕೆಗೆ ಹಸ್ತಾಂತರ ಜಂಟಿ ಅನುಮೋದನೆ ಸಭೆ ನಡೆಯಿತು ಈ ಸಂದರ್ಭದಲ್ಲಿ ಬುಡಾ ಅಧಿಕಾರಿಗಳಾದ ಎಇಇ ಎಸ್.ಸಿ. ನಾಯ್ಕ್, ಬಸವರಾಜ್ ಹಿರೇಮಠ್, ಶ್ರೀಮತಿ ಮಂಜುಶ್ರೀ, ಪ್ರಸನ್ನ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಎಇಇ ದೇಶಪಾಂಡೆ, ಅಂಕಿತ್, ಕೆರೂರ್ ಮತ್ತು ಸುನಿಲ್ ನೇತೃತ್ವದಲ್ಲಿ ಒಟ್ಟು 25 ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಗಟರ್ ಹಾಗೂ ಗಾರ್ಡನ್, ಅಭಿವೃದ್ಧಿ ಕಾಮಗಾರಿಗಳ ಪಟ್ಟಿಗೆ ಜಂಟಿ ಸಹಿ ಹಾಕಿ ಅನುಮೋದನೆ ನೀಡಲಾಯಿತು, ಹಾಗೂ ಎ ಖಾತಾ ಮತ್ತು ಬಿ ಖಾತಾ ಇ ಆಸ್ತಿ ಅನುಮೋದನೆ ನೀಡಿಕೆ ಸೋಮವಾರದಿಂದ ಪ್ರಾರಂಭವಾಗಲಿದೆ, ಮತ್ತು ಎಲ್ ಅಂಡ್ ಟಿಯಿಂದ 24×7 ಕುಡಿಯುವ ನೀರಿನ ಯೋಜನೆ ಕಲ್ಪಿಸಲು ಅನುಮೋದನೆ ನೀಡಲಾಗಿದೆ, ಈ ಪ್ರಕ್ರಿಯೆಯಲ್ಲಿ ಸಾಕಾರ ನೀಡಿದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಮಂತ್ರಿಗಳು, ಉತ್ತರ ಮತ್ತು ದಕ್ಷಿಣ ಶಾಸಕರುಗಳಿಗೆ ಕೊಂಗಾಲಿ ಕೃತಜ್ಞತೆ ಸಲ್ಲಿಸಿದ್ದಾರೆ ರಾಮತೀರ್ಥದ ನಗರದ ಸಮಸ್ತ ನಾಗರಿಕರಿಗೆ ಅರ್ಪಿಸುವ ಅಲ್ಪ ಸೇವೆ ಮತ್ತು ಹೋರಾಟಕ್ಕೆ ಜಯ? ಎಂಬ ಭಾವನೆ ನನ್ನದಾಗಿದೆ ಮಹಾ ಜನತೆಗೆ ಹೃದಯಪೂರ್ವಕ ಅಭಿನಂದನೆಗಳೆಂದು ಹೇಳಿದ್ದಾರೆ