ಇನ್ನು ಸಿಎಂ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್’ನ್ನು ವಿಪಕ್ಷ ನಾಯಕರು ಟೀಕಿಸಿದ್ದು, ವಿಪಕ್ಷ ನಾಯಕ ಆರ್. ಅಶೋಕ ಇದು ಸಾಬರ ಬಜೆಟ್ ಎಂದು ಜರಿದರೇ, ಶಾಸಕ ಯತ್ನಾಳ ಇದು ಪಾಕಿಸ್ತಾನದ ಬಜೆಟ್ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ ಅವರು , ಯಾವುದೇ ಹೊಸ ಯೋಜನೆಗಳಿಲ್ಲ. ಅಲ್ಲೇ ತಪ್ಪೇ ಸಾರಿಸುವ ರೀತಿ ಹಳೆಯ ಯೋಜನೆಗಳನ್ನೇ ಮುಂದುವರೆಸಿದ್ದಾರೆ. ನೀರಾವರಿ ಯೋಜನೆಗಳನ್ನು ಕೇಂದ್ರದ ಅನುಮತಿ ಪಡೆದು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಇದು ಸಾಬರ ಬಜೆಟ್. ಒಂದೇ ವರ್ಷದಲ್ಲಿ ಹೈಯೆಸ್ಟ್ ಸಾಲ ಮಾಡಿ ಘೋಷಿಸಿದ ಬಜೆಟ್ ಇದಾಗಿದೆ ಎಂದು ಜರಿದರು.
ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದು ಕೇವಲ ಜಮೀರ್ ಅಹ್ಮದ್ ಬಜೆಟ್ ಆಗಿದೆ. ಇದು ಕರ್ನಾಟಕದ ಬಜೆಟೋ ಅಥವಾ ಪಾಕಿಸ್ತಾನದ ಬಜೆಟೋ ತಿಳಿಯದಾಗಿದೆ. ದಲಿತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಯಾವುದೇ ಯೋಜನೆಗಳಿಲ್ಲ. ಮುಸ್ಲಿಂ ಸಮಾಜದ ಮಹಿಳೆಯರಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡಿ ಕೋಮು ಗಲಭೆಗೆ ಒತ್ತು ನೀಡಿದ್ದಾರೆ. ನೀರಾವರಿಗೆ ಯಾವುದೇ ಯೋಜನೆಯಿಲ್ಲ. ಕೇವಲ ಗ್ಯಾರಂಟಿ ಯೋಜನೆಗಳಿಗೆ ಸಾಲ ಮಾಡಿ ಘೋಷಿಸಲಾದ ಬಜೆಟ್ ಇದಾಗಿದೆ ಎಂದರು.