ಧಾರವಾಡ: ಆದಿ ಶಕ್ತಿ ಮಹಿಳಾ ಮಂಡಳ ವತಿಯಿಂದ ಧಾರವಾಡದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಲಾಗಿದ್ದು, ಮಾಜಿ ಸಚಿವ ಹಾಗೂ ಹಾಲಿ ಗ್ರಾಮೀಣ ಶಾಸಕ ವಿನಯ ಕುಲಕರ್ಣಿವರ ಧರ್ಮಪತ್ನಿ ಶೀವಲೀಲಾ ಕುಲಕರ್ಣಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಧಾರವಾಡದ ಮದಿಹಾಳ ನಗರದ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿದ್ದು, ಮಹಿಳಾ ಮಂಡಳದ ಪದಾಧಿಕಾರಿಗಳೆಲ್ಲರು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪತ್ನಿ ಶೀವಲೀಲಾ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಪುರುಷರಷ್ಟೇ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಬೆಳೆಯುತ್ತಿದ್ದಾರೆ. ಹಾಗಾಗಿ ನಾವು ಯಾವುದರಲ್ಲಿಯು ಕಡಿಮೆ ಇಲ್ಲ ಎಂಬ ಭಾವನೆಯ ಜತೆಗೆ ಧೈರ್ಯದೊಂದಿಗೆ ಮುಂದೆ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮ ಬಲೋಗಿ, ಶ್ರೀಮತಿ ಸುಶೀಲಾ ಕೊಟ್ರಶೆಟ್ಟರ್, ವೀಣಾ ಹಾಲಳ್ಳಿ, ರಾಜೇಶ್ವರಿ ಗಾಯಕ್ವಾಡ, ಪ್ರೀಯಾ ಪಾಟೀಲ್ ಸೇರಿ ಆದಿಶಕ್ತಿ ನಗರದ ಮಹಿಳಾ ಮಂಡಳದ ಸದಸ್ಯರು ಉಪಸ್ಥಿತಿದ್ದರು