Bailahongala

ಹೆಸ್ಕಾಂ ಇಲಾಖೆಯಿಂದ ಅರ್ಥಕ್ಕೆ ನಿಂತ ಅಂಗನವಾಡಿ ಕಾಮಗಾರಿಕೆ ಮಕ್ಕಳ ಶಿಕ್ಷಣಕ್ಕೆ ಕುತ್ತಾಯಿತ ಹೆಸ್ಕಾಂ ಇಲಾಖೆ

Share

ಕಿತ್ತೂರು ಕ್ಷೇತ್ರದಕ್ಕೆ ಸಂಬಂಧಿಸಿದ ತಿಗಡಿ ಗ್ರಾಮದಲ್ಲಿ ಇರುವಂತ ಅಂಗನವಾಡಿ ಶಿಥಿಲಾವಸ್ಥೆ ಹೊಂದಿದ್ದು ಸರಿಸುಮಾರು 30 ಮಕ್ಕಳು ಆ ಕೊಠಡಿಯಲ್ಲಿ ಶಿಕ್ಷಣ ಪಡೆದಿದ್ದು ಕಳೆದ ಎರಡು ತಿಂಗಳ ಹಿಂದೆ ಗ್ರಾಮದ ಜನರ ಮನವಿಯಂತೆ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಹೊಸದಾಗಿ ಅಂಗನವಾಡಿ ನಿರ್ಮಾಣ ಮಾಡಲು ಗುದ್ದಲಿ ಪೂಜೆಯ ಕಾರ್ಯಕ್ರಮ ಮಾಡಿರುತ್ತಾರೆ

ಅದೇ ಪ್ರಕಾರವಾಗಿ ಅಂಗನವಾಡಿ ಕಾಮಗಾರಿಕೆ ಕೂಡ ನಡೆದಿರುತ್ತದೆ ಆದರೆ ನಿರ್ಮಾಣ ಹಂತದಲ್ಲಿರುವಂತ ಅಂಗನವಾಡಿ ಮುಂದೆ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತ ಕರೆಂಟ್ ಕಂಬಗಳು ಅಂಗನವಾಡಿಯ ಪಕ್ಕದಲ್ಲಿ ಇರುವುದರಿಂದ ಕಾಮಗಾರಿಕೆ ಮಾಡಲು ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ಕೆಲಸ ಮಾಡುವಂತ ಕಾರ್ಮಿಕರು ಕೈಯಲ್ಲಿ ಜೀವ ಹಿಡಿದು ಕೆಲಸ ಮಾಡುವಂತಹ ಪರಿಸ್ಥಿತಿ ಉಂಟಾಗಿರುತ್ತದೆ

ಇದೇ ವಿಷಯವಾಗಿ ಸ್ಥಳೀಯರು ಶಾಸಕರಿಗೆ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಈ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸರಿಸುಮಾರು 30 ಅಂಗನವಾಡಿಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಹಾಗೂ ಕಾಮಗಾರಿಕೆ ಬೇಗನೆ ಮಾಡಿ ಮುಗಿಸಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಜನರು ಅಧಿಕಾರಿಗಳನ್ನು ಕೇಳಿಕೊಂಡರು ಕೂಡ

ವಿದ್ಯುತ್ ಇಲಾಖೆ ಅಧಿಕಾರಿಗಳು ಮಾತ್ರ ಇವತ್ತು ನಾಳೆ ಎಂದು ಹೇಳಿ ಸರಿಸುಮಾರು 2 ತಿಂಗಳು ಕಳೆದರೂ ಇದುವರೆಗೂ ವಿದ್ಯುತ್ ಕಂಬಗಳನ್ನು ತೆರವು ಮಾಡದ ಅಧಿಕಾರಿಗಳು ಸ್ವತಹ ಕಿತ್ತೂರು ಕ್ಷೇತ್ರದ ಶಾಸಕರು ಕೂಡ ಫೋನ್ ಮೂಲಕ ಮತ್ತು ಕೆಡಿಪಿ ಸಭೆಯಲ್ಲಿ ನೇರವಾಗಿ ಇದೇ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಕೂಡ ಅಧಿಕಾರಿಗಳು ಮಾತ್ರ ಶಾಸಕರ ಮಾತನ್ನೇ ಕೇಳುತ್ತಿಲ್ಲ

ಕಿತ್ತೂರು ಕ್ಷೇತ್ರದ ಸಾರ್ವಜನಿಕರ ವಲಯದಲ್ಲಿ ಅಧಿಕಾರಿಗಳೇ ಶಾಸಕರ ಮಾತನ್ನೇ ಕೇಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ ಶಾಸಕರ ಮಾತುಗಳನ್ನೇ ಕೇಳದ ಅಧಿಕಾರಿಗಳು ಇನ್ನು ಜನಸಾಮಾನ್ಯರ ಮಾತುಗಳನ್ನು ಕೇಳುತ್ತಾರಾ ಎಂಬ ಪ್ರಶ್ನೆ ಕಿತ್ತೂರು ಕ್ಷೇತ್ರದಲ್ಲಿ ಉದ್ಭವವಾಗಿದೆ ಇದೆ ಸಮಸ್ಯೆ ಬಗ್ಗೆ ಇನ್ ನ್ಯೂಸ್ ವರದಿಗಾರರು ವಿದ್ಯುತ್ ಇಲಾಖೆಯ ಸಂಬಂಧಪಟ್ಟಂತ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ಉತ್ತರ ಹೀಗಿತ್ತು

ಬೈಲಹೊಂಗಲ AEE ಅಧಿಕಾರಿಯಾದ ಆಚಾರಿ ಯವರನ್ನು ಕೇಳಿದಾಗ ಒಂದು ವಾರದಲ್ಲಿ ನಾವು ವಿದ್ಯುತ್ ಕಂಬಗಳನ್ನು ತೆರವುಗೊಳಿಸುತ್ತೇವೆ ಎಂದು ಭರವಸೆ ನೀಡಿದರು ಹಾಗಿದ್ದರೆ ವಿದ್ಯುತ್ ಇಲಾಖೆ ಅಧಿಕಾರಿಗಳ ನೀಡಿರುವಂಥ ಮಾತು ಮತ್ತು ಭರವಸೆ ನಿಜವಾಗುತ್ತಾ ಕಾದು ನೋಡಬೇಕಾಗಿದೆ

ವರದಿಗಾರರು
ಶಾನೂಲ ಮ
ಕಿತ್ತೂರು

Tags:

error: Content is protected !!