Uncategorized

ಮುಳುಗಡೆ ನಗರಿಯಲ್ಲಿ ಹೆಚ್ಚಿದ ರಣ ಬಿಸಿಲು-ಆರೋಗ್ಯ ಇಲಾಖೆ ಅಲರ್ಟ್

Share

ಬಾಗಲಕೋಟೆ: ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಏರಿಕೆ ಆಗ್ತಿದೆ. ರಣ ಬಿಸಿಲಿಗೆ ಜನರು ಪರಿತಪಿಸುವಂತಾಗಿದೆ.ಮುಳುಗಡೆ ಜಿಲ್ಲೆಯಲ್ಲಿ  ರಣ ಬಿಸಿಲು ಹೇಳತೀರದಂತಿದೆ.ಹೆಚ್ಚಿದ ಬಿಸಿಲಿನಿಂದ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ತಾಪಮಾನ ನಿರ್ವಹಣ ವಾರ್ಡ್ ಸಜ್ಜು ಮಾಡಲಾಗಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

GFX….

ಮುಳುಗಡೆ ನಗರಿಯಲ್ಲಿ ದಿನೆದಿನೆ ಹೆಚ್ಚುತ್ತಿದೆ ಬಿಸಿಲಿನ ತಾಪಮಾನ..

ಬಿಸಿಲಿನಿಂದ ಹೈರಾಣದ ಬಾಗಲಕೋಟೆ ಮಂದಿ….

ಮುಳುಗಡೆ ನಗರದಲ್ಲಿ
ಡಿ ಹೈಡ್ರೆಜನ್ ನಿಂದ ತಪ್ಪಿಸಿಕೊಳ್ಳಲು ಜನ್ರು ತಂಪು ಪಾನಿಯ ಮೊರೆ..

ಬಾಗಲಕೋಟೆಯಲ್ಲಿ ಬರೊಬ್ಬರಿ 38 ಡಿಗ್ರಿ ಸೆಲ್ಸಿಯೆಸ್ ತಾಪಮಾನ ದಾಖಲು..

ಆರೋಗ್ಯ ಇಲಾಖೆ ಹೈ ಅಲರ್ಟ್,ಸರ್ಕಾರಿ ಆಸ್ಪತ್ರೆಗಳಲ್ಲಿ  ಪ್ರತ್ಯೇಕ ತಾಪಮಾನ ನಿರ್ವಹಣ ಕೊಠಡಿ ಆರಂಭ..

ಒಂದೆಡೆ ಹೆಚ್ಚುತ್ತಿರೋ ಬಿಸಿಲಿನ ತಾಪಮಾನ.ಮತ್ತೊಂದೆಡೆ ರಣ ಬಿಸಿಲಿನ ತಾಪ ತಣಿಸಲು ತಂಪು ಪಾನೀಯಗಳ ಮೊರೆ ಹೊಗ್ತಿರೋ ಜನ್ರು.ಇನ್ನೊಂದೆಡೆ ರಣ ಬಿಸಿಲಿನಿಂದ ಡಿ ಹೈಡ್ರೋಜನ್ ಗೊಳಗಾದವ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿದ್ದಗೊಂಡ ಪ್ರತ್ಯೇಕ ತಾಪಮಾನ ನಿರ್ವಹಣ ವಾರ್ಡ್.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯಲ್ಲಿ.ಹೌದು ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 38 ರಿಂದ 40 ಡಿಗ್ರಿಸೆಲ್ಸಿಯಸ್ ತಲುಪಿದೆ.ಜನ್ರು ಬಿಸಿಲಿನ ದಾಹ ತನಿಸಲು ತಂಪು ಪಾನೀಯ ಮೊರೆ ಹೊಗ್ತಿದ್ದಾರೆ.ಹೆಚ್ಚುತ್ತಿರೋ ತಾಪಮಾನದಿಂದ ಜಿಲ್ಲಾ ಶರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ ಹೈಡ್ರೋಜನ್ ಗೆ ತುತ್ತಾದವ್ರಿಗೆ ಪ್ರತ್ಯೇಕ ತಾಪಮಾನ ನಿರ್ವಹಣ ವಾರ್ಡ್ ಓಪನ್ ಮಾಡಿದೆ.ಬಿಸಿಲಿನಿಂದ ಅಸ್ವಸ್ಥಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ತಾಪಮಾನ ನಿರ್ವಹಣ ವಾರ್ಡ್ ಸ್ಥಾಪನೆ ಮಾಡಲಾಗಿದೆ ಅಂತಾರೆ ಡಿಎಚ್ ಓ…

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು,ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.ಸಾರ್ವಜನಿಗಳಿಗೆ ಮನವಿ ಮಾಡಿಕೊಳ್ತಿದೆ.ತಾಪಮಾನ ಹೆಚ್ಚುತ್ತಿರೋದ್ರಿಂದ ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡದಂತೆ.ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವಂತೆ ಹಾಗೂ ಹತ್ತಿ ಬಟ್ಟೆ ಧರಿಸುವಂತೆ ಮತ್ತು ಹೆಚ್ಚು ನೀರು ಕುಡಿಯುವಂತೆ ಮನವಿ ಮಾಡ್ತಿದೆ.ಹೀಟ್ ಸ್ಟ್ರೋಕ್ ಗೆ ಒಳಗಾದವ್ರಿಗೆ ಜಿಲ್ಲಾಸ್ಪತ್ರೆಯ ಪ್ರತ್ಯೇಕ ತಾಪಮಾನ ನಿರ್ವಹಣ ಕೊಠಡಿಯಲ್ಲಿ ಚಿಕಿತ್ಸೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ.ರಣ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾದ ತಾಪಮಾನ ನಿರ್ವಹಣ ವಾರ್ಡ್ ಕುರಿತು ವೈದ್ಯ ಲಕ್ಷ್ಮೀಕಾಂತ್ ಹೇಳಿದ್ದು ಹೀಗೆ…

 

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ರಣ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಆಸುಪಾಸಿದೆ. ಇನ್ನೂ ಏಪ್ರಿಲ್,ಮೇ ತಿಂಗಳಲ್ಲಿನ ಬಿಸಿಲಿನ ತಾಪಮಾನ ಎಲ್ಲಿಗೆ ಹೋಗಿ ತಲುಪುತ್ತೋ ಅನ್ನೋ ಆತಂಕ ಬಾಗಲಕೋಟೆ ಮಂದಿಗೆ ಚಿಂತೆ ಹೆಚ್ಚಿಸುವಂತೆ ಮಾಡಿದ್ದಂತೂ ಸುಳ್ಳಲ್ಲ.

Tags:

error: Content is protected !!