Belagavi

ಮಧ್ಯಾಹ್ನ ಬಿಸಿಯೂಟದ ಶಾಲೆಗಳಾಗಿರುವ ಸದನಗಳು…

Share

ಶಾಸಕರು ಮತ್ತು ಸಚಿವರುಗಳು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ವಿಷಯಗಳನ್ನು ಪ್ರಶ್ನಿಸದೇ, ಅಧಿವೇಶನ ಭತ್ಯೆಗಳನ್ನು ಮತ್ತು ಉಚಿತ ಊಟೋಪಚಾರಗಳ ಜೊತೆಗೆ ಕಿರುನಿದ್ರೆ ಚೇ‌ರ್ ಬಳಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಶಾಸಕಾಂಗ, ಕಾರ್ಯಾಂಗಗಳ ಕ್ರಮವನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾಡ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರು ಇಂದು ಬೆಳಗಾವಿ ನಗರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಅಧಿವೇಶನ ನಡೆಯುವ ಸಮಯದಲ್ಲಿ ಶಾಸಕರುಗಳಿಗೆ ಸರ್ಕಾರದಿಂದ ದಿನಭತ್ಯೆಗಳನ್ನು ನೀಡಲಾಗುತ್ತಿದೆ. ಮತ್ತು ಊಟ-ಉಪಹಾರಗಳನ್ನು ನೀಡಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲದೇ ಇದ್ದರೂ ಸದನದಲ್ಲಿ ಹಾಜರಾತಿಯ ಸಲುವಾಗಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಊಟ-ಉಪಹಾರ, ಚಹಾ-ಕಾಫಿ ಮುಂದುವರೆದು “ರಿಕ್ಲೈನರ್ ಚೇರ”ಗಳನ್ನು ನೀಡುವ ಸರ್ಕಾರದ ಕ್ರಮವನ್ನು & ಮನಸ್ಸಿಗೆ ಬಂದ ರೀತಿಯಲ್ಲಿ ವೇತನ ಭತ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಶಾಸಕರುಗಳ ನಡೆಯನ್ನು ಪ್ರಶ್ನಿಸಿ ಶೀಘ್ರದಲ್ಲಿಯೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವದು ಎಂದು ಗೌರವಾನ್ವಿತ ರಾಜ್ಯಪಾಲರು ಹಾಗೂ ಉಭಯ ಸದನಗಳ ಅಧ್ಯಕ್ಷರುಗಳಿಗೆ & ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದರು.

ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ರಾಜ್ಯದ ಜನರ ಸಮಸ್ಯೆಗಳನ್ನು ಸಮರ್ಥವಾಗಿ ವಿಧಾನ ಸಭಾ ಅಧಿವೇಶನಗಳಲ್ಲಿ ಮಂಡಿಸಿ ಆಳವಾಗಿ ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ದಿಸೆಯಲ್ಲಿ ಸದನವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವದು & ಇವುಗಳಿಗೆ ಸಂಬಂಧಿಸಿದ ಶಾಸನಗಳನ್ನು ರಚನೆ ಮಾಡುವ ಜವಾಬ್ದಾರಿಯು ಮಾನ್ಯ ಶಾಸಕರುಗಳ ಮೇಲೆ ಇರುತ್ತದೆ. ಅಲ್ಲದೇ ಸಾರ್ವಜನಿಕ ಸೇವಕರೆಂದು ಚುನಾಯಿತರಾಗಿರುವ ಇವರ ಕರ್ತವ್ಯ ಕೂಡಾ ಆಗಿರುತ್ತದೆ. `ಈ ಉದ್ದೇಶಗಳ ಸಲುವಾಗಿಯೇ ಪ್ರತಿ ನಿಮಿಷಕ್ಕೆ ಲಕ್ಷ-ಲಕ್ಷ ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡಿ ಅಧಿವೇಶನ ನಡೆಸಲಾಗುತ್ತದೆ ಎಂಬುದನ್ನು ನಮ್ಮ ಶಾಸಕರುಗಳು ತಿಳಿದುಕೊಳ್ಳಬೇಕು.ಪ್ರತಿ ತಿಂಗಳು ವೇತನ & ವಿವಿಧ ಭತ್ಯೆಗಳು ಸೇರಿದಂತೆ 1,45,000 ರೂ.ಗಳು & ಕ್ಷೇತ್ರ ಪ್ರಯಾಣ ಭತ್ಯೆಗೆ 60,000 ರೂ.ಗಳು ಸೇರಿ ತಿಂಗಳಿಗೆ ಒಟ್ಟು 2,05,000 ರೂ.ಗಳನ್ನು ಸಾರ್ವಜನಿಕರ ತೆರಿಗೆ ಹಣದಲ್ಲಿ ಖಜಾನೆಯಿಂದ ಪಾವತಿಸಲಾಗುತ್ತಿದೆ ಎಂದರು.

Tags:

error: Content is protected !!