Uncategorized

ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ

Share

ಹಾರೂಗೇರಿ ಪಟ್ಟನದ ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಕುಡಚಿ ಮತಕ್ಷೇತ್ರದಲ್ಲಿ ಯಾವುದೇ ಭಾಗದಲ್ಲಿ ಕೂಡ ಇದುವರೆಗೆ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬದಲ್ಲಿ ಅಹಿತಕರ ಘಟನೆಗಳು ನಡೆದಿರುವುದಿಲ್ಲ ಹಾಗಾಗಿ ಇನ್ನು ಮುಂದೆ ಕೂಡ ಸೌಹಾರ್ದಯುತ ಹಬ್ಬಗಳನ್ನು ಆಚರಣೆ ಮಾಡಬೇಕೆಂದು ಹಾರೋಗೇರಿ ಪಿಎಸ್ಐ ಮಾಳಪ್ಪ ಪೂಜಾರಿ ಹೇಳಿದರು..

ಯಾರಿಗೂ ಕೂಡ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚುವುದಾಗಲಿ ರಾಸಾಯನಿಕ ಬಣ್ಣಗಳನ್ನು ಬಳಸುವುದಾಗಿ ಮಾಡಬೇಡಿ ಎಂದು ವಿನಂತಿಸಿದರು ಹಾಗೂ ಯಾವುದೇ ವಾಹನಗಳನ್ನು ಸೈಲೆನ್ಸರ್ ಪೈಪ್ ತೆಗೆದು ವಾಹನ ಚಲಾಯಿಸಬೇಡಿ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಮಾಡಿಕೊಡದೆ ಎಲ್ಲಾ ಬಾಂಧವರು ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬುರಾನ್ ಶೇಕ್ ಮಾತನಾಡಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ನಿಮಿತ್ತ ಉಪವಾಸ ಇರುವುದರಿಂದ ಹಾಗೂ ಹೋಳಿ ಹಬ್ಬ ಕೂಡ ಶುಕ್ರವಾರ ಇರುವುದರಿಂದ ಮುಸ್ಲಿಂ ಬಾಂಧವರಿಗೆ ಒತ್ತಾಯಪೂರ್ವಕವಾಗಿ ಹಚ್ಚುವುದಾಗಲಿ ಮಾಡಬೇಡಿ ಎಂದು ವಿನಂತಿಸಿದರು.
ಭಾರತ ದೇಶದ ಹಿಂದೂ ಯುವಕರ ಏಕೈಕ ದೊಡ್ಡ ಹಬ್ಬ ಆದುದರಿಂದ ನಾವು ಯಾರಿಗೂ ಕೂಡ ಒತ್ತಾಯದಿಂದ ಬಣ್ಣ ಹಚ್ಚುವುದಾಗಲಿ ವಾಹನಗಳನ್ನು ಓಡಿಸುವುದಾಗಲಿ ಮಾಡುವುದಿಲ್ಲ ಇಲ್ಲಿವರೆಗೆ ಕುಡಚಿ ಮತಕ್ಷೇತ್ರದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆದಿಲ್ಲ ಇನ್ನು ಮುಂದೆಯೂ ಕೂಡ ನಡೆಯುವುದಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎಂದು ಉದಯ ಗಾಣಿಗೇರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಪ್ಪಾಸಾಬ ಸರಿಕರ, ಬಾಬು ನಡೋನಿ, ವಸಂತ ಅಲಖನೂರ ,ರಾಮಣ್ಣ ಶಿರಗುರೆ, ಕಿರಣ ಗಡ್ಡಿ ,ಕರೆಪ್ಪ ಓಲೆಕಾರ್, ಮಹಾದೇವ ಮಗದುಮ್, ಇನ್ನು ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

Tags:

error: Content is protected !!