ಮುಳುಗಡೆ ನಗರಿ ಮಂದಿಗೆ ಹೊಳಿ ಹಬ್ಬ ಅಂದ್ರೆ ಎಲ್ಲಿಲ್ಲದ ಸಂಭ್ರಮ ಸಡಗ. ದೇಶದಲ್ಲಿ ಕೊಲ್ಕತ್ತಾ ಹೊರತು ಪಡಿಸಿದ್ರೆ ಅತಿ ಹೆಚ್ಚು ಬಣ್ಣ ಆಡುವ ಖ್ಯಾತಿ ಮುಳುಗಡೆ ನಗರಕ್ಕಿದೆ. ಕೊಲ್ಕತ್ತಾದಲ್ಲಿ ಐದು ದಿನ ಬಣ್ಣವಾಡಿದ್ರೆ.ಈ ನಗರದಲ್ಲಿ ನಾಲ್ಕು ದಿನ ಬಣ್ಣದೋಕುಳಿ ಆಡುವ ಮೂಲಕ ಹೋಳಿ ಹಬ್ಬವನ್ನ ಆಚರಣೆ ಮಾಡ್ತಾರೆ. ಮುಳಗಡೆ ನಗರಿ ಬಾಗಲಕೋಟೆಯಲ್ಲಿನ ಮೊದಲ ದಿನದ ರಂಗಿನಾಟದ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

GFX…
ರಂಗೇರಿದ ಬಾಗಲಕೋಟೆ ಐತಿಹಾಸಿಕ ಹೋಳಿಹಬ್ಬ..
ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ರಂಗಿನಾಟಕ್ಕೆ ಬರ್ಜರಿ ಓಪನಿಂಗ್..
ಬಾಗಲಕೋಟೆ,ನವನಗರ,ವಿದ್ಯಾಗಿರಿಯಲ್ಲಿ ಬಣ್ಣದೋಕುಳಿ ಸಡಗರ..
ಡಿಜೆ ಸೌಂಡ್ ಗೆ ಸಖತ್ ಸ್ಟೇಪ್ಸ್ ಹಾಕಿದ ಯುವಕ- ಯುವತಿಯರು..
GFX…
ಒಂದೆಡೆ ಬಣ್ಣ ಎರಚಾಡ್ತಿರೋ ಮಕ್ಕಳು. ಮತ್ತೊಂದೆಡೆ ಪುಷ್ಪ ಚಿತ್ರದ ಸಾಂಗ್ ಮೈ ಮರೆತು ಸ್ಟೆಪ್ ಹಾಕ್ತಿರೋ ಯುವತಿಯರು. ಇನ್ನೊಂದೆಡೆ ನಗರದ ಬೀದಿಗಳಲ್ಲಿ ಯುವಕರ ಬಣ್ಣದೋಕುಳಿ. ಇಂತಹದ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದಲ್ಲಿ.ಹೌದು ಬಾಗಲಕೋಟೆ ಐತಿಹಾಸಿಕ ಹೋಳಿ ಬಣ್ಣದಾಟ ಆರಂಭಗೊಂಡಿದ್ದು. ಮೊದಲ ದಿನವಾದ ಇಂದು ಬಾಗಲಕೋಟೆ,ನವನಗರ, ವಿದ್ಯಾಗಿರಿಯಲ್ಲಿ ಯುವಕ-ಯುವತಿಯರು ಬಣ್ಣದಲ್ಲಿ ಮಿಂದೆದ್ದರು.ಮಕ್ಕಳ ಜೊತೆ ತಾಯಂದಿರು ಡಿಜೆ ಸೌಂಡ್ ಗೆ ಸಖತ್ ಸ್ಟೆಪ್ ಹಾಕಿ ಹೋಳಿ ರಂಗೀನಾಟ ಸಂಭ್ರಮಿಸಿದ್ರು…
ಇನ್ನು ಬಾಗಲಕೋಟೆ ಹೋಳಿ ಹಬ್ಬ ಅಂದ್ರೆ ಅಕ್ಕ-ಪಕ್ಕದ ಜಿಲ್ಲೆಯವರು ಬಂದು ರಂಗಿನಾಟದ ಸಂಭ್ರಮವನ್ನ ಕಣ್ತುಂಬಿಕೊಳ್ಳೋ ಮಟ್ಟಿಗೆ ಪ್ರಸಿದ್ದಿ ಪಡೆದಿದೆ.ದೇಶದಲ್ಲಿ ಕೊಲ್ಕತ್ತಾ ಬಿಟ್ರೆ ಹೆಚ್ಚು ಬಣ್ಣ ಆಡುವ ನಗರ ಎಂಬ ಹೆಗ್ಗಳಿಕೆ ಬಾಗಲಕೋಟೆ ಹೋಳಿ ಹಬ್ಬಕ್ಕಿದೆ.ಇಂದಿನಿಂದ ಆರಂಭವಾದ ರಂಗಿನಾಟ ಇನ್ನು ಮೂರು ದಿನಗಳ ಕಾಲ ಬಾಗಲಕೋಟೆ ನಗರದಲ್ಲಿ ಬಣ್ಣದೋಕುಳಿ ವಿಜ್ರಂಭಣೆಯಿಂದ ನಡೆಯೋದು ವಿಷೇಶ. ಹೋಳಿ ಬಣ್ಣದಾಟದಲ್ಲಿ ಬೇಧಭಾವ ಮರೆತು ಬಣ್ಣ ಎರಚುತ್ತಾ ಸಂಭ್ರಮಿಸಿ ಹಬ್ಬ ಆಚರಣೆ ಮಾಡೋದು ಮುಳುಗಡೆ ಮಂದಿಯ ವಿಶೇಷತೆ..
ಒಟ್ಟಿನಲ್ಲಿ ಬಾಗಲಕೋಟೆ ಐತಿಹಾಸಿಕ ಹೋಳಿ ರಂಗಿನಾಟ ಇಂದಿನಿಂದ ಆರಂಭಗೊಂಡಿದ್ದು, ಇನ್ನು ಮೂರು ದಿನಗಳ ಕಾಲ ನಗರದಲ್ಲಿ ರಂಗು-ರಂಗಿನ ಆಟದ ಸಂಭ್ರಮ ಮನೆ ಮಾಡಲಿದ್ದು. ಯುವಕ- ಯುವತಿಯರು ರಂಗಿನಾಟದಲ್ಲಿ ಭಾಗಿಯಾಗಿ ಮುಳುಗಡೆ ನಗರದ ಐತಿಹಾಸಿಕ ಹೋಳಿ ಹಬ್ಬದ ಮೊದಲ ದಿನದ ಬಣ್ಣದೋಕುಳಿಯಲ್ಲಿ ವಯಸ್ಸಿನ ಬೇದ ಮರೆತು ಸಂಭ್ರಮಿಸಿದ್ದು ವಿಶೇಷ..
ಇನ್ ನ್ಯೂಸ್ ಬಾಗಲಕೋಟ