Vijaypura

ಶಾರ್ಟ್ ಸರ್ಕ್ಯೂಟ್ ಗೆ ದ್ರಾಕ್ಷಿ ತೋಟ ಸುಟ್ಟು ಭಸ್ಮ: ಕಂಗಾಲಾದ ಅನ್ನದಾತ

Share

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದ್ರಾಕ್ಷಿ ತೋಟಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಸುಟ್ಟು ಹೋಗಿರುವ ಘಟನೆ ವಿಜಯಪುರ ತಾಲೂಕಿನ ಬಾರಾಕೊಟ್ರಿ ತಾಂಡಾದ ಬಳಿ ನಡೆದಿದೆ. ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಎರಡು ಎಕರೆ ದ್ರಾಕ್ಷಿ ತೋಟ ಹಾಳಾಗಿದೆ. ಬಸವರಾಜ ಕಾಳೆ ಎಂಬುವವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿ ದ್ರಾಕ್ಷಿ ಬೆಳೆಗೆ ಹಾಕಿದ್ದ ಹನ ನೀರಾವರಿ ಪೈಪ್ ಗಳು ಹಾಗೂ ಬೋರ್ ವೆಲ್ ಪೈಲ್ ಬೆಂಕಿಗಾಹುತಿಯಾಗಿವೆ.

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ವ್ಯಾಪಿಸಿದಂತೆ ಕ್ರಮ ಕೈಗೊಂಡರು. ಎರಡದಿಂದ ಮೂರ ಲಕ್ಷ ರೂಪಾಯಿ ಹಾನಿಯಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Tags:

error: Content is protected !!