ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ನೀರು ಪಾಲಾದ ವೇಳೆ ಬಾಲಕನ ರಕ್ಷಿಸಲು ಹೋಗಿ ಬಾಲಕನ ಅಜ್ಜಿಯೂ ನೀರು ಪಾಲಾಗಿ ಬಾಲಕ ಹಾಗೂ ಅಜ್ಜಿ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ.

ಅಸಾದ್ ಮುಲ್ಲಾ (12) ಸಲೀಮಾ ಮುಲ್ಲಾ (55) ಮೃತ ಅಜ್ಜಿ ಹಾಗೂ ಮೊಮ್ಮಗನಾಗಿದ್ದಾರೆ. ಪೊಲೀಸರು ಇಬ್ಬರ ಶವ ಹೊರ ತೆಗೆದಿದ್ದು, ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ