Uncategorized

ಇ ಬೈಕ್ ಪ್ರೇಮಿಗಳೇ ಇಲ್ಲೊಮ್ಮೆ ನೋಡಿ: ಧಗಧಗನೇ ಉರಿದ ಇ ಬೈಕ್

Share

ಇತ್ತಿಚೆಗೆ ಎಲೆಕ್ಟ್ರಾನಿಕ್ ಬೈಕ್ ಗಳ ಕ್ರೇಜ್ ಹೆಚ್ಚಾಗತೊಡಗಿದೆ. ನಿರ್ವಹಣೆ ಕಡಿಮೆ, ಉಳಿತಾಯ ಜಾಸ್ತಿ ಎನ್ನುವ ದೃಷ್ಟಿಯಿಂದ ಜನತೆ ಈ ಬೈಕ್ ಗಳತ್ತ ಆಕರ್ಷಿತರಾಗುತ್ತಿದ್ದಾರೆ.‌ ಆದರೆ ಚಾರ್ಜಿಂಗ್ ಹಾಕಿದ್ದ ಎಲೆಕ್ಟ್ರಾನಿಕ್ ಬೈಕ್ ಬೆಂಕಿಗಾಹುತಿಯಾಗಿದೆ. ಬೈಕ್ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಹೊತ್ತಿ ಸುಟ್ಟು ಕರಕಲಾಗಿದೆ. ಬೈಕ್ ಗೆ ಬೆಂಕಿ ಬಿದ್ದಿದ್ದರಿಂದ ಸ್ಥಳದಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾದ ಘಟನೆ ವಿಜಯಪುರ ದಲ್ಲಿ ನಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲಾ.‌ ವಿಜಯಪುರ ನಗರದ ಸಾಯಿ ಪಾರ್ಕ ಹತ್ತಿರದಲ್ಲಿ ಹತ್ತಿರವಿರುವ ಬೇಕರಿಯಲ್ಲಿ ಘಟನೆ ನಡೆದಿದೆ. ಬೇಕರಿ ಸರಕು ಸಾಗಣೆ ಮಾಡಲು ಬಳಸುತ್ತಿದ್ದ ಬೈಕ್ ನ್ನು ಚಾರ್ಜ್ ಗೆ ಹಾಕಿದ ಸಂದರ್ಭದಲ್ಲಿ ಬೆಂಕಿ ಹೊತ್ತುಕೊಂಡಿದೆ. ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

 

Tags:

error: Content is protected !!