ಪ್ರತಿಯೊಂದು ಸರ್ಕಾರ ಕೂಡ ತೆರಿಗೆ ಮಾಡುತ್ತೆ ಜನರಿಂದ ತೆರಿಗೆ ತೆಗೆದುಕೊಂಡು ಒಳ್ಳೆಯ ಕೆಲಸಗಳಿಗೆ ಬಳಸುವುದು ಸರ್ಕಾರದ ಕರ್ತವ್ಯ . ಆದರೆ ಯಾವುದರ ಮೇಲೆ ತೆರಿಗೆ ಹಾಕ್ತಾರೆ ಅನ್ನೋದು ಬಹಳ ಮುಖ್ಯ ಆಗುತ್ತೆ. 15% ಬಸ್ ದರ, ನಂದಿನಿ ಹಾಲು, ಮೆಟ್ರೋ ಜಿಎಸ್ಟಿ ಇವೆಲ್ಲವೂ ಕೂಡ ಜನ ವಿರೋಧಿ ತೆರಿಗೆಗಳು ಇಂತಹ ಟ್ಯಾಕ್ಸ್ಗಳು ಜನರ ಹೊಟ್ಟೆ ಮೇಲೆ ಹೊಡೆಯುತ್ತೆ ಅದನ್ನು ನಾನು ಒಪ್ಪುವುದಿಲ್ಲ ಎಂದು ನಟ ಹಾಗೂ ಹೋರಾಟಗಾರ ಚೇತನ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಒಂದು ಪರ್ಸೆಂಟ್ ಶ್ರೀಮಂತರ ಹತ್ತಿರ 40% ಆಸ್ತಿ ಇದೆ. ಶ್ರೀಮಂತರ ಮೇಲೆ ಹೆಚ್ಚಿಗೆ ಟ್ಯಾಕ್ಸ್ ಹಾಕಿ ಬಡವರಿಗೆ ನೀಡುವಂತೆ ಮಾಡಬೇಕು. ಯಾರ ಮೇಲೆ ಟ್ಯಾಕ್ಸ್ ಹಾಕ್ಬೇಕು ಅವರಿಗೆ ಟಿಕೆಟ್ ಕೊಟ್ರೆ ಅವರ ಮೇಲೆ ಟ್ಯಾಕ್ಸ್ ಹಾಕೋಕೆ ಆಗುವುದಿಲ್ಲ. ಈ ವ್ಯವಸ್ಥೆಯಲ್ಲಿ ಶ್ರೀಮಂತರೇ ಆಳ್ತಾ ಇದ್ದಾರೆ ಶ್ರೀಮಂತರ ಮೇಲೆ ತೆರಿಗೆ ಹಾಕಿ ಆರ್ಥಿಕ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಹನಿಟ್ರ್ಯಾಪ್ ವಿಚಾರ
ಹನಿಟ್ರ್ಯಾಪ್ ಅಂದ್ರೆ ಒಬ್ಬ ಶ್ರೀಮಂತ ವ್ಯಕ್ತಿಯನ್ನು ಲೈಂಗಿಕ ಕ್ರಿಯೆ ಮೂಲಕ ಬಲೆಗೆ ಬೀಳಿಸಿಕೊಳ್ಳುವಂಥದ್ದು
ಹನಿಟ್ರ್ಯಾಪ್ ಅಂದ್ರೆ ಪ್ರಭಾವಿ ಗಂಡಸರು ಅವರನ್ನ ಅವರೇ ಬಲಿಪಶು ಮಾಡಿಕೊಂಡು ಮಹಿಯರ ಮೇಲೆ ತಪ್ಪು ಹೋರಿಸುತ್ತಾರೆ. ನನ್ನ ಪ್ರಕಾರ ಹನಿಟ್ರ್ಯಾಪ್ ಪುರುಷ ಪ್ರಧಾನದ ಆಲೋಚನೆ.ಸಾಮಾನ್ಯವಾಗಿ ಇಬ್ಬರ ಒಪ್ಪಿಗೆಯಿಂದ ಈ ಕ್ರಿಯೆ ನಡೆಯುತ್ತೆ. ಜನರ ಒಳ್ಳೆ ಕೆಲಸ ಮಾಡುವಂತವರು ಬೇರೆ ಕೆಟ್ಟ ಕೆಲಸಕ್ಕೆ ಕೈ ಹಾಕಿದರೇ ಅದರಿಂದ ಸಮಾಜಕ್ಕೂ ಒಳ್ಳೆದಲ್ಲ . ಗಂಡಸರು ತಮ್ಮನ್ನೇ ತಾವೇ ಬಲಿಪಶು ಮಾಡಿಕೊಳ್ಳುವಂತಹ ಕೆಲಸ ಇದೆ.
ಜನರಿಗೂ ಕೂಡ ಒಬ್ಬ ವ್ಯಕ್ತಿಯ ಖಾಸಗಿ ವಿಷಯದ ಬಗ್ಗೆ ಒಲವು ಇರುತ್ತೆ . ನಮಗೆ ಸದನದಲ್ಲಿ ಜನಪರ ಕಾನೂನು ಬಗ್ಗೆ ಹೆಚ್ಚಿನ ವಿಚಾರಗಳ ಚರ್ಚೆ ಆಗಬೇಕು
ಸಿಡಿ, ಪೆನ್ ಡ್ರೈವ್ ಗಿಂತ ಜನರ ಬದುಕಿನ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು ಎಂದರು.