Belagavi

ಕಾಂಗ್ರೆಸ್ಸಿನವರು ಸತ್ಯವನ್ನು ಸತಾಯಿಸಬಹುದು ಆದರೇ, ಸತ್ಯವನ್ನು ಸಾಯಿಸಲು ಸಾಧ್ಯವಿಲ್ಲ…

Share

ಕಾಂಗ್ರೆಸ್ಸಿನವರು ಸತ್ಯವನ್ನು ಸತಾಯಿಸಬಹುದು ಆದರೇ, ಸತ್ಯವನ್ನು ಸಾಯಿಸಲು ಸಾಧ್ಯವಿಲ್ಲ. ಅಭಿವೃದ್ಧಿಗೆ ಒತ್ತು ನೀಡುವವರಿಗೆ ಪಕ್ಷಾತೀತವಾಗಿ ಸಹಕಾರ ನೀಡುವುದಾಗಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೇಳಿದರು.

ಮಹಾಪೌರ ಚುನಾವಣೆಯ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು, ಬೆಳಗಾವಿ ಮಹಾಪೌರರ ಚುನಾವಣೆ ನಡೆಯದಂತೆ ಕಾಂಗ್ರೆಸ್ ಸದಸ್ಯರು ಶತಾಯಗತಾಯ ಪ್ರಯತ್ನಪಟ್ಟಿದ್ದಾರೆ. ಅತ್ಯಂತ ಕೆಳಮಟ್ಟಕ್ಕೆ ಹೋಗಿ ರಾಜಕಾರಣ ಮಾಡಲಾಗಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಇಬ್ಬರು ಸದಸ್ಯರನ್ನು ಅನರ್ಹಗೊಳಿಸಿದ್ದರು. ಆದರೇ, ಕಾನೂನುಬಾಹಿರವಾದ ಈ ನಿರ್ಣಯಕ್ಕೆ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ. ನಾವು ಕೂಡ ಅರ್ಜಿ ಸಲ್ಲಿಸಿದರೇ, ಕಾಂಗ್ರೆಸ್ಸಿನ ಮೂರು ಸದಸ್ಯರು ಕೂಡ ಅನರ್ಹರಾಗುತ್ತಿದ್ದರು. ನಮ್ಮದು ಯಾರ ವಿರುದ್ಧವು ಇಲ್ಲ. ನಮ್ಮದು ಅಭಿವೃದ್ಧಿಯ ಅಜೆಂಡಾ. ಅಭಿವೃದ್ಧಿ ಮಾಡುವವರಿಗೆ ನಾವು ಸಹಕಾರ ನೀಡುತ್ತೇವೆ. ಸತ್ಯವನ್ನು ಸತಾಯಿಸಬಹುದು ಆದರೇ ಸಾಯಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಇನ್ನು ಮತ್ತೇ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಲು ಪ್ರಯತ್ನಿಸಿದರೇ, ಮೊನ್ನೆ ನ್ಯಾಯಾಲಯ ಛೀಮಾರಿ ಹಾಕಿದೆ. ಈ ಬಾರಿ ಮಹಾಮಂಗಳಾರತಿ ಮಾಡಲಿದೆ ಎಂದರು. ಸದಸ್ಯರ ಅನರ್ಹ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳ ವಿರುದ್ಧ ಹೈಕೋರ್ಟಿಗೆ ಹೋಗಿ ಅವರ ತಕ್ಕ ಪಾಠ ಕಲಿಸಲಾಗುವುದು ಎಂದರು.

ಇನ್ನು ಮರಾಠಿ ಮತ್ತು ಕನ್ನಡ ಮೇಯರ್ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ಇಲ್ಲಿ ಯಾವುದೇ ಭಾಷಾ ಅಥವಾ ಧರ್ಮದ ವಿವಾದವಿಲ್ಲ. ಎಲ್ಲ ಸಮುದಾಯಗಳಿಗೂ ಅವಕಾಶವನ್ನು ನೀಡಲಾಗುವುದು ಎಂದರು.

Tags:

error: Content is protected !!