ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಗ್ನಿವೀರ್‌ನ 5ನೇ ಬ್ಯಾಚ್‌ಗೆ ಆಯ್ಕೆಯಾಗಿರುವ ವಿಜಯಪುರದ ಧೀರ ವನಿತೆ ಅಕ್ಷತಾ ಯೋಗೀಶ ಗಂಧೆ ಇವರನ್ನು ಅಭಿನಂಧಿಸ ಲಾಯಿತು. ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶ್ರೀ ಗಜಾನನ ಉತ್ಸವ ಸಮೀತಿಗಳ ಮಹಾಮಂಡಳದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿ ಸೋಮವಾರ ಮಹಾ ಮಂಡಳದ ವತಿಯಿಂದ ಉಚಿತ ಅನ್ನದಾಸೋಹದಲ್ಲಿ ಸಾಧಕರಿಗೆ ಸನ್ಮಾನಿಸುವದು ವಾಡಿಕೆ.

ಈ ಹಿನ್ನೆಲೆಯಲ್ಲಿ ಅಕ್ಷತಾ ಯೋಗೀಶ ಗಂಧೆ ಇವರನ್ನು ಸನ್ಮಾನಿಸಿ ಅಭಿನಂಧಿಸಲಾಯಿತು. ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಹಾಗೂ ಎಪಿ ಗ್ರೂಪ್ ನ ಅಧ್ಯಕ್ಷ ಈರಣ್ಣಾ ಪಟ್ಟಣಶೆಟ್ಟಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅಕ್ಷತಾ’ನನಗೆ ಅಗ್ನಿವೀರ ಆಗುತ್ತೇನೆ ಎಂಬ ಆದಮ್ಯವಾದ ವಿಶ್ವಾಸವಿತ್ತು. ದ್ವಿತೀಯ ಪಿಯುಸಿ ಮುಗಿಸಿದಾಕ್ಷಣ ನಮ್ಮೂರಿನ ದ್ರೋಣ ಆಕಾಡೆಮಿಯಲ್ಲಿ ತರಬೇತಿಗೆ ಸೇರಿದೆ. ಕೇರಳದಲ್ಲಿ ನಡೆದ ಆಗ್ನಿವೀರ ಭರ್ತಿಗೆ ಹೋದೆ. ಅಲ್ಲಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಸು ಮಾಡಿದೆ. ಆ ನಂತರದಲ್ಲಿ ಓರಿಸ್ಸಾದಲ್ಲಿ ನಡೆದ ಲಿಖಿತ ಪರೀಕ್ಷೆಯನ್ನು ಸುಲಭವಾಗಿ ಪಾಸು ಮಾಡಿ ತರಬೇತಿಗೆ ಆಯ್ಕೆಯಾದೆ’ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಜಗದೀಶ ಮುಚ್ಚಂಡಿ, ಅಖಿಲ ಶೀಲವಂತ, ಸಚಿನ ಅಡಕಿ, ಉಮೇಶ ಅಡಕಿ, ಬಾಬು ಜಗದಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.