Belagavi

3 ವರ್ಷಗಳಿಂದ ನಿರ್ಮಾಣವಾಗದ ಚವಾಟಗಲ್ಲಿ ರಸ್ತೆ:3ನೇ ಬರ್ತ್ ಡೇ ಮಾಡಿ ಅಣಕಿಸಿದ ನಾಗರಿಕರು

Share

ಬೆಳಗಾವಿಯ ಚವಾಟ ಗಲ್ಲಿಯಲ್ಲಿ ಹೊಸ ರಸ್ತೆ ನಿರ್ಮಾಣ ಮಾಡಲು ಹಳೆಯ ರಸ್ತೆಯನ್ನು ಹಡ್ಡಲಾಗಿತ್ತು ಮೂರು ವರ್ಷ ಕಳೆದರೂ ಹೊಸ ರಸ್ತೆ ನಿರ್ಮಾಣವಾಗಿಲ್ಲ ಇದರಿಂದ ಹೈರಾಣಾಗಿರುವ ಸ್ಥಳೀಯ ನಾಗರಿಕರು ಇಂದು
ಪ್ರತಿಭಟನೆ ನಡೆಸಿದರು.

ಬೆಳಗಾವಿ ನಗರದ ಚವಾಟ್ ಗಲ್ಲಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಹೊಸ ರಸ್ತೆ ನಿರ್ಮಾಣ ಮಾಡಲು ಹಾಳಾದ ರಸ್ತೆಯನ್ನು ಕಿತ್ತುಹಾಕಲಾಗಿತ್ತು ಆದರೆ ಮೂರು ವರ್ಷ ಕಳೆದರೂ ರಸ್ತೆಯನ್ನೇ ನಿರ್ಮಾಣ ಮಾಡಿಲ್ಲ ಇದರಿಂದಾಗಿ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಹಾಳಾದ ರಸ್ತೆಯ ಮೂರನೇ ಹುಟ್ಟುಹಬ್ಬವನ್ನು ಆಚರಿಸಿ ಆಡಳಿತ ವ್ಯವಸ್ಥೆಯನ್ನು ಅಣಕಿಸಿದ್ದಾರೆ. ಶಾಸಕ ರಾಜು ಸೆಟ್, ಮಾಜಿ ಉಪ ಮಹಾಪೌರ ರೇಷ್ಮಾ ಪಾಟೀಲ್ ಹಾಗೂ ಪಾಲಿಕೆ ನಗರಸೇವಕರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ಸ್ಥಳೀಯ ಹಿರಿಯ ನಿವಾಸಿ ಅರುಣ್ ಪವಾರ್ ತಮ್ಮ ಅಸಮಾಧಾನ ಹೊರಹಾಕಿದರು

ಅಜ್ಜಿ ಒಬ್ಬರು ಪ್ರತಿಕ್ರಿಯೆ ನೀಡಿ ರಸ್ತೆ ಹದಗೆಟ್ಟಿದ್ದರಿಂದ ನಮಗೆಲ್ಲ ಇಲ್ಲಿ ಓಡಾಡಲು ತುಂಬಾ ತೊಂದರೆಯಾಗಿದೆ ಹಲವಾರು ಬಾರಿ ಎಡವಿ ಬಿದ್ದಿದ್ದೇವೆ ಗಾಯಗಳಾಗಿವೆ ಆದಷ್ಟು ಬೇಗ ರಸ್ತೆ ನಿರ್ಮಾಣವಾಗಬೇಕು ಟ್ಯಾಕ್ಸ್ ತುಂಬಿಸಿಕೊಳ್ಳುವುದು ಅಷ್ಟೇ ಅಲ್ಲ ಸೌಲಭ್ಯಗಳನ್ನೂ ನೀಡಬೇಕು ಎಂದು ಅಜ್ಜಿ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದರು. 15 ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡದಿದ್ದರೆ ಪ್ರತಿಭಟನಾ ಮೆರವಣಿಗೆ ಮೂಲಕ ಹೋಗಿ ಮಹಾನಗರ ಪಾಲಿಕೆ ಎದುರು ದರಣಿ ನಡೆಸಲಾಗುವುದೆಂದರು

Tags:

error: Content is protected !!