raybag

ಕುಡಚಿಯ ಅಜೀತ ಬಾನೆ ಶಾಲೆಯ ಮಕ್ಕಳಿಗೆ 360 ಆಂಗಲ್ ಗುಮ್ಮಟ ಪ್ರೋಜೆಕ್ಟರನಲ್ಲಿ ಸೌರವ್ಯೂಹದ ವೀಕ್ಷಣೆ ಭಾಗ್ಯ

Share

ರಾಯಬಾಗ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಶಾಲೆಗಳ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಗುಮ್ಮಟ ಪ್ರೋಜೆಕ್ಟರನಲ್ಲಿ ಸೌರವ್ಯೂಹದ ವೀಕ್ಷಣೆ ಭಾಗ್ಯ ದೊಕಿತು.

ಕುಡಚಿ ಪಟ್ಟಣದಲ್ಲಿ ಮೊದಲು ಬಾರಿಗೆ 8 ಮೀಟರ್ ಗುಮ್ಮಟ, 4 ಪ್ರೊಜೆಕ್ಷನ್ ಸಿಸ್ಟಮ್‌ನೊಂದಿಗೆ ಗ್ರಹಗಳು, ಸೌರವ್ಯೂಹ ಇತ್ಯಾದಿಗಳನ್ನು ಅಧ್ಯಯನ ಮಾಡಲು ಪ್ಲಾನೆಟೇರಿಯಮಅನ್ನು ಅನ್ವೇಷಿಸಲು 45 ನಿಮಿಷಗಳ ಬಾಹ್ಯಾಕಾಶ ಪ್ರವಾಸದ ಹೊಸ ಅನುಭವ ವಿದ್ಯಾರ್ಥಿಗಳು ಉತ್ಸಾಹ ಆನಂದದಿಂದ ಪಡೆದುಕೊಂಡರು.

ಪಟ್ಟಣದ ಅಜೀತ ಬಾನೆ ಶಾಲಾ ಆವರಣದಲ್ಲಿ ಸತತ ಮೂರು ದಿನಗಳ ಕಾಲ ಎಲ್.ಕೆ.ಜಿಯಿಂದ ಹಿಡಿದು, ಹತ್ತನೇ ತರಗತಿಯವರೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ವೀಕ್ಷಿಸಿ ಆನಂದಿಸಿದರು.

ಪ್ರತಿ ಮಗುವಿಗೆ ರೂ.300 ಶುಲ್ಕ ಇದ್ದರು ಸಂಸ್ಥೆಯ ನಿರ್ದೇಶಕ ಅಮಿತ್ ಘಾಟಗೆ ತಮ್ಮ ಶಾಲಾ ಮಕ್ಕಳಿಗೆ ಕೇವಲ ರೂ. 100ಗಳಲ್ಲಿ ವೀಕ್ಷಿಸಲು ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಹೊಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಎಸ.ಟೊಣ್ಣೆ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್.ಪಿ.ಕಾಂಬಳೆ, ಶಿಕ್ಷಕರಾದ ಅಶೋಕ ಯಲ್ಲಟ್ಟಿ, ಸವನೂರ ಸರ, ಆರ್.ಎ.ಭಾವಿ, ಎಸ್.ಎಮ.ಭಾವಿ, ಹೊನ್ನಾಕಟ್ಟಿ ಸೇರಿದಂತೆ ಇತರ ಶಿಕ್ಷಕರು ಪಾಲಕರು ಉಪಸ್ಥಿತರಿದ್ದರು.

Tags:

error: Content is protected !!