ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಕೋಳಿಗಳು ಸಾಯುತ್ತಿದ್ದು, ಕೋಳಿ ಸಾಗಾಣಿಕೆದಾರರು ಸತ್ತು ಕೋಳಿಗಳನ್ನು ರಸ್ತೆ ಬದಿ ಎಸೆದಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ

ಬಾಗಲಕೋಟೆ ಜಿಲ್ಲೆಯಲ್ಲಿ ರಣಬಿಸಿಲು, 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಬಿಸಿಲಿನ ಬೇಗೆಯನ್ನು ತಾಳಲಾರದೆ ಕೋಳಿಗಳು ಸಾಯುತ್ತಿವೆ. ಇದರಿಂದ ಕೋಳಿ ಫಾರಂ ಮಾಲೀಕರು ಆತಂಕಗೊಂಡಿದ್ದಾರೆ. ಕೋಳಿ ಸಾಗಾಣಿಕೆದಾರರು ಸತ್ತ ಕೋಳಿಗಳನ್ನು ಹುನಗುಂದ ತಾಲೂಕು ಅಮಿನಗಡದ ಹರವಲಯದಲ್ಲಿ ರಸ್ತೆ ಬದಿಯಲ್ಲಿ ಎಸೆದಿರುವ ದೃಶ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ